ಶೃಂಗೇರಿ: ರಸ್ತೆ ನಿರ್ಮಾಣ ಕಾರ್ಯ ಆರಂಭ

ಸೋಮವಾರ, ಜೂಲೈ 22, 2019
24 °C

ಶೃಂಗೇರಿ: ರಸ್ತೆ ನಿರ್ಮಾಣ ಕಾರ್ಯ ಆರಂಭ

Published:
Updated:

ಶೃಂಗೇರಿ : ಪಟ್ಟಣದ ಭಾರತೀ ಬೀದಿಯ ಕೇಂದ್ರ ಬಿಂದು ಕಟ್ಟೆಬಾಗಿಲಿನಿಂದ ತುಂಗಾನದಿ ದಂಡೆಯ ಮೇಲೆ ನಿರ್ಮಾಣವಾಗುತ್ತಿರುವ ಪರ್ಯಾಯ ರಸ್ತೆಗೆ ಪೂರಕವಾಗಿ ಪಟ್ಟಣ ಪಂಚಾಯಿತಿಯಿಂದ ಭಾನುವಾರ ರಸ್ತೆ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿತು.ಪ್ರತಿನಿತ್ಯವೂ ಪಟ್ಟಣದ ಭಾರತೀ ಬೀದಿಯಲ್ಲಿ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಲು ಸಲುವಾಗಿ ಹೊಸದಾಗಿ ಕೂಡು ರಸ್ತೆ ನಿರ್ಮಿಸಲು ಕೈಗೆತ್ತಿಕೊಂಡಿದೆ. ಇದರಿಂದ ಭಾರತೀ ಬೀದಿಯಲ್ಲಿ ಆಗುವ ಟ್ರಾಫಿಕ್ ಜಾಮ್ ಕಡಿಮೆಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮಾ ಸೋಮಶೇಖರ್, ಮಾಜಿ ಅಧ್ಯಕ್ಷರಾದ ಟಿ. ಕೆ. ಪರಾಶರ, ನಾಗೇಶ್ ಕಾಮತ್ ಹಾಗೂ ಸದಸ್ಯರು ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್. ಚಂದ್ರಶೇಖರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry