ಶೆಂಬರ್ಲೀನ್ ಹ್ಯಾಟ್ರಿಕ್: ಫೈನಲ್‌ಗೆ ದಕ್ಷಿಣ ಆಫ್ರಿಕಾ

7

ಶೆಂಬರ್ಲೀನ್ ಹ್ಯಾಟ್ರಿಕ್: ಫೈನಲ್‌ಗೆ ದಕ್ಷಿಣ ಆಫ್ರಿಕಾ

Published:
Updated:

ನವದೆಹಲಿ: ಶೆಂಬರ್ಲೀನ್ ಡಿರ್ಕಿ `ಹ್ಯಾಟ್ರಿಕ್~ ಸಾಧನೆಯಿಂದ ದಕ್ಷಿಣ ಆಫ್ರಿಕಾದ ವನಿತೆಯರ ತಂಡವು ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯಲ್ಲಿ ಶುಕ್ರವಾರ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು.ಬೆಳಿಗ್ಗೆ ನಡೆದ ಮಧ್ಯಾಹ್ನ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 4-1ರಿಂದ ಕೆನಡಾ ತಂಡವನ್ನು ಸೋಲಿಸಿ ತನ್ನ ಅಗ್ರಸ್ಥಾನವನ್ನೂ ಉಳಿಸಿಕೊಂಡಿತು.ಪಂದ್ಯದಲ್ಲಿ ಮೊದಲು ಗೋಲು ಗಳಿಸಿದ್ದು ಕೆನಡಾದ  ತೀಯಾ ಕೆಲ್ಲಿ (16ನೇ ನಿಮಿಷ). ಆದರೆ ನಂತರ ದಕ್ಷಿಣ ಆಫ್ರಿಕಾದ ಡೆಮಾನ್ಸ್ ಸಟೆಲ್ (23ನಿ) ಹೊಡೆದ ಗೋಲಿನಿಂದ ಪ್ರಥಮಾರ್ಧವು 1-1ರಿಂದ ಸಮವಾಯಿತು.ಆದರೆ ನಂತರ ಶೆಂಬರ್ಲೀನ್ ಆಡಿದ ರೀತಿಗೆ ಕೆನಾಡದ ಆಟಗಾರ್ತಿಯರು ಬೆಚ್ಚಿದರು. ಡಿಫೆಂಡರ್ ಶೆಂಬರ್ಲೀನ್   (41, 60, 62ನಿ) ಸತತ ಮೂರು ಗೋಲು ಗಳಿಸಿ ತಂಡದ ಗೆಲುವು ಖಚಿತಪಡಿಸಿದರು.ಲೀಗ್‌ನ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು, ಒಂದು ಡ್ರಾ ಮಾಡಿಕೊಂಡಿರುವ ದಕ್ಷಿಣ ಆಫ್ರಿಕಾದ ತಂಡವು 13 ಪಾಯಿಂಟ್ ಗಳಿಸಿ ಪ್ರಥಮ ಸ್ಥಾನ ಪಡೆಯಿತು.ಉಕ್ರೇನ್‌ಗೆ ಜಯ: ಒಲೆನಾ ಇವಾಕನೆಕೋ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಉಕ್ರೇನ್ ತಂಡದ ವನಿತೆಯರು 1-0 ಯಿಂದ ಪೊಲೆಂಡ್ ವಿರುದ್ಧ ಜಯ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry