ಮಂಗಳವಾರ, ಮೇ 18, 2021
30 °C

ಶೆಟ್ಟರ್ ಗ್ರಾಮೀಣಾಭಿವೃದ್ಧಿ ಹರಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಸಚಿವ ಜಗದೀಶ ಶೆಟ್ಟರ್ ಗ್ರಾಮೀಣಾಭಿವೃದ್ಧಿ ಹರಿಕಾರ. ಸಮಬಾಳು- ಸಮಪಾಲು ಸಿದ್ಧಾಂತ ಎಂದು ಸಚಿವ ರೇವುನಾಯಕ ಬೆಳಮಗಿ ಬಣ್ಣಿಸಿದರು. ತಾಲ್ಲೂಕಿನ ಹಳ್ಳಿಖೇಡ         (ಬಿ)ದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅನ್ನದಾನಕ್ಕಿಂತ ಜಲದಾನ ಶ್ರೇಷ್ಟ. ಅದನ್ನು ಯಾವ ಚುನಾಯಿತ ಪ್ರತಿನಿಧಿ ಕೊಡುವರೋ ಅಂಥವರು ಚುನಾವಣೆಯಲ್ಲಿ ಆರಿಸಿ ಕಳಿಸಿದ ಜನತೆಯ ಋಣ ತೀರಿಸಿದಂತೆ. ಆ ಕಾರ್ಯ ಶಾಸಕ ರಾಜಶೇಖರ ಪಾಟೀಲ ಪ್ರಾಮಾಣಿಕ ನಿಭಾಯಿಸುತ್ತಿದ್ದಾರೆ ಎಂದರು.  ತಂದೆ ಬಸವರಾಜ ಪಾಟೀಲ ಬಂಗಾರ, ಸುಪುತ್ರ ಶಾಸಕ ಪಾಟೀಲ ಬೆಳ್ಳಿ. ವಿಶೇಷವಾಗಿ ಹುಮನಾಬಾದ್ ಗೌಡರ ಒಂದೇ ನಿವಾಸದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಇರುವುದು ವಿಶೇಷ ಎಂದು ಬೆಳಮಗಿ     ನುಡಿದರು.ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ನೀಡುವುದು ಮತ್ತು ಕೂಲಿಹಣ ಪಾವತಿಸುವ ವಿಷಯದಲ್ಲಿ ವಿಳಂಬ ಧೋರಣೆ ಆಗಿರುವ ಕುರಿತು ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಈಗಾಗಲೇ ಕೆ.ಡಿ.ಪಿ ಸಭೆಯಲ್ಲಿ ಎಚ್ಚರಿಸಲಾಗಿದೆ. ಈಗ ಮತ್ತೊಮ್ಮೆ ಹೇಳುತ್ತಿರುವುದಾಗಿ ತಿಳಿಸಿದರು.ಜಲನಿರ್ಮಲ ಯೋಜನೆಯ ಕಾಮಗಾರಿ ಗುರುನಾಥ ಕೊಳ್ಳುರ ಅವರಿಗೆ ನೀಡಲಾಗಿದೆ. ನಾಗಮಾರಪಳ್ಳಿ, ಬಸವರಾಜ ಪಾಟೀಲ, ಸುಭಾಷ ಕಲ್ಲೂರ ಪರಸ್ಪರ ಬೀಗರೇ ಆಗಿದ್ದಾರೆ. ಬೀಗರ ಸಂಬಂಧಗಳ ಮಧ್ಯ ಕಾಮಗಾರಿ ಕಳಪೆ ಆಗದಿರಲಿ ಎಂದು ಗುತ್ತಿಗೆದಾರರಿಗೆ ಸೂಚ್ಯವಾಗಿ ತಿಳಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಮೊದಲಾದವರು ಇದ್ದರು.ಪುಸ್ತಕ ನೀಡಿ: ಸಚಿವ ಬೆಳಮಗಿ ನಂತರ ಮಾತನಾಡಿದ ಶಟ್ಟರ ಹಾರ ತುರಾಯಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಕನಿಷ್ಟ ಬೆಲೆಯ ಅತ್ಯುತ್ತಮ ಪುಸ್ತಕ ನೀಡುವ ಪರಂಪರೆ ಆರಂಭಿಸಬೇಕು. ಸರ್ಕಾರ ಮಟ್ಟದಲ್ಲಿ ಈ ಕುರಿತಂತೆ ಅಧಿಕಾರಿಗಳಿಗೆ ಸೂಕ್ಷ್ಮ ತಿಳಿಸಲಾಗಿದೆ.ಆದರೇ ಅದೂ ಕಟ್ಟಿನಿಟ್ಟನಿಂದ ಜಾರಿಗೆ ತರುವ ಅಗತ್ಯವಿದೆ ಎಂದು ತಿಳಿಸಿದ ಸಚಿವ ಜಗದೀಶ ಶೆಟ್ಟರ್ ಕಾರ್ಯಕ್ರಮ ಸಂಯೋಜಕರಿಗೆ ಇದೇ ಸಂದರ್ಭದಲ್ಲಿ ಸೂಕ್ಷ್ಮ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.