ಶೆಟ್ಟಿ ಮೇಲೆ ನಿಷೇಧ: ತಡೆಯಾಜ್ಞೆ ಎತ್ತಿ ಹಿಡಿದ ಹೈಕೋರ್ಟ್‌

7

ಶೆಟ್ಟಿ ಮೇಲೆ ನಿಷೇಧ: ತಡೆಯಾಜ್ಞೆ ಎತ್ತಿ ಹಿಡಿದ ಹೈಕೋರ್ಟ್‌

Published:
Updated:

ಮುಂಬೈ (ಪಿಟಿಐ): ಬಿಸಿಸಿಐ ಆಡಳಿತಾಧಿಕಾರಿ ಪ್ರೊ.ರತ್ನಾಕರ್‌ ಶೆಟ್ಟಿ ಅವರ ಮೇಲೆ ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) ವಿಧಿಸಿದ್ದ ನಿಷೇಧ ಶಿಕ್ಷೆಗೆ ಸ್ಥಳೀಯ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಬಾಂಬೆ ಹೈಕೋರ್ಟ್‌ ಎತ್ತಿ ಹಿಡಿದಿದೆ.ಸದಸ್ಯರ ವಿರುದ್ಧ ಅವ್ಯವಹಾರ ಆರೋಪ ಮಾಡಿದ್ದಕ್ಕಾಗಿ ಶೆಟ್ಟಿ ಅವರ ಮೇಲೆ ಎಂಸಿಎ ಐದು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿತ್ತು. ಎಂಸಿಎನ ಎಲ್ಲಾ ಚಟುವಟಿಕೆಗಳಿಂದ ಅವರನ್ನು ದೂರವಿರಿಸಲು ನಿರ್ಧರಿಸಿತ್ತು.ಇದನ್ನು ಶೆಟ್ಟಿ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ ಸ್ಥಳೀಯ ನ್ಯಾಯಾಲಯ ನೀಡಿದ ತಡೆಯಾಜ್ಞೆ ವಿರುದ್ಧ ಹೈಕೋರ್ಟ್‌ನಲ್ಲಿ ಕ್ರಿಕೆಟ್‌ ಸಂಸ್ಥೆಯು ಮೇಲ್ಮನವಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್‌, ಶೆಟ್ಟಿ ಅವರು ಎಂಸಿಎ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry