ಶೆಟ್ರೂ ಮಠಕ್ಕೆ ರೊಕ್ಕ ಕೊಟ್ರು!

7

ಶೆಟ್ರೂ ಮಠಕ್ಕೆ ರೊಕ್ಕ ಕೊಟ್ರು!

Published:
Updated:
ಶೆಟ್ರೂ ಮಠಕ್ಕೆ ರೊಕ್ಕ ಕೊಟ್ರು!

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರಂಭಿಸಿದ, ಮಠಗಳಿಗೆ ಅನುದಾನ ನೀಡುವ ಪದ್ಧತಿಯನ್ನು ಜಗದೀಶ ಶೆಟ್ಟರ್ ಅವರೂ ಮುಂದುವರಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ವಿವಿಧ ಮಠ ಮತ್ತು ಧಾರ್ಮಿಕ ಸಂಸ್ಥೆಗಳು, ಚರ್ಚ್ ಮತ್ತು ಬುದ್ಧ ವಿಹಾರಕ್ಕೆ ಮೀಸಲಿಟ್ಟಿರುವ ಅನುದಾನದ ವಿವರ ಇಲ್ಲಿದೆ:ಬೆಂಗಳೂರಿನ ಕೆಂಗೇರಿಯಲ್ಲಿ ಬಸವ ಸಮಿತಿಯ `ಅಧ್ಯಾತ್ಮ ಸಂಸತ್ ಭವನ' ನಿರ್ಮಾಣಕ್ಕೆ ರೂ 5 ಕೋಟಿ

ತುಮಕೂರಿನ ಸಿದ್ಧಗಂಗಾ ಮಠಕ್ಕೆ ರೂ 5 ಕೋಟಿ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ  ರೂ 5 ಕೋಟಿ

ಹುಬ್ಬಳ್ಳಿಯ ಮೂರು ಸಾವಿರ ಮಠದ ಯಾತ್ರಿ ನಿವಾಸಕ್ಕೆ ರೂ 2 ಕೋಟಿ

ಚಿತ್ರದುರ್ಗದ ಮುರುಘಾ ಮಠದಲ್ಲಿ ದಾಸೋಹ ಭವನ ನಿರ್ಮಾಣಕ್ಕೆ ರೂ 2 ಕೋಟಿ

ತಿಂಥಣಿ ಮೌನೇಶ್ವರ ಕ್ಷೇತ್ರ ಅಭಿವೃದ್ಧಿಗೆ ರೂ 1 ಕೋಟಿ

ಕೂಡಲಸಂಗಮದ ಪಂಚಮಪೀಠಕ್ಕೆ  ರೂ 2 ಕೋಟಿ

ಧಾರವಾಡದ ಮುರುಘಾ ಮಠಕ್ಕೆ  ರೂ 2.5 ಕೋಟಿ

ಶಿರಸಿ ಬಳಿಯ ಸೋಂದಾ ಸ್ವರ್ಣವಲ್ಲಿ ಮಠಕ್ಕೆ ರೂ 2 ಕೋಟಿ

ಹರಿಹರಪುರ ಮಠದ ಜೀರ್ಣೋದ್ಧಾರಕ್ಕೆ ರೂ 1 ಕೋಟಿ

ದಾವಣಗೆರೆಯ ವಿರಕ್ತ ಮಠದ ಜೀರ್ಣೋದ್ಧಾರ ಹಾಗೂ ಬಸವ ಜಯಂತಿ ಶತಮಾನ ಸ್ಮಾರಕ ಭವನಕ್ಕೆ ರೂ 5 ಕೋಟಿ

ಚಾಮರಾಜನಗರ ತಾಲ್ಲೂಕು ಹರದನಹಳ್ಳಿಯಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮೀಜಿ ಜನ್ಮಸ್ಥಳ ಅಭಿವೃದ್ಧಿಗೆ ರೂ 1 ಕೋಟಿ

ಬೆಳಗಾವಿಯಲ್ಲಿ ವೀರಶೈವ ಸಭಾಭವನ ನಿರ್ಮಾಣಕ್ಕೆ ರೂ 1 ಕೋಟಿ

ಗದಗ ಜಿಲ್ಲೆಯ ಮುಳಗುಂದದ ಬಾಲಲೀಲ ಮಹಾಂತ ಶಿವಯೋಗಿ ಗವಿಮಠಕ್ಕೆ  ರೂ 1 ಕೋಟಿ

ಕುಂದಗೋಳ ತಾಲ್ಲೂಕಿನ ಪುಣ್ಯಕ್ಷೇತ್ರ ಕಳಸದ ಅಭಿವೃದ್ಧಿಗೆ ರೂ 2 ಕೋಟಿ

ಬಾಳೇಹೊನ್ನೂರು ಮಠದ ಸುವರ್ಣ ಭವನಕ್ಕೆ ರೂ 2 ಕೋಟಿ

ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್ ಜೀರ್ಣೋದ್ಧಾರಕ್ಕೆ ರೂ 2 ಕೋಟಿ

ಹುಬ್ಬಳ್ಳಿಯ ಕ್ರಿಶ್ಚಿಯನ್ ಫೆಲೋಶಿಪ್ ಚರ್ಚ್ ಅಭಿವೃದ್ಧಿಗೆ ರೂ 2 ಕೋಟಿ

ಗುಲ್ಬರ್ಗದ ಸಿದ್ಧಾರ್ಥ ವಿಹಾರ ಅಭಿವೃದ್ಧಿಗೆ ರೂ 5 ಕೋಟಿ

ಇದಲ್ಲದೆ, ವಿವಿಧ ವರ್ಗಗಳ ಧಾರ್ಮಿಕ ಸಂಸ್ಥೆ ಕಟ್ಟಡಗಳ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ರೂ 100 ಕೋಟಿ

ಹಿಂದುಳಿದ ಸಮುದಾಯಗಳಿಗೆ ಸೇರಿದ ವಿವಿಧ ಮಠಗಳು, ಸಂಸ್ಥೆಗಳು ನಡೆಸುವ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಒಟ್ಟು ರೂ 50 ಕೋಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry