ಶನಿವಾರ, ಜೂನ್ 19, 2021
23 °C

ಶೆಹ್ಲಾ ಹತ್ಯೆ ಪ್ರಕರಣ:ಸುಳ್ಳು ಪತ್ತೆ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದೋರ್ (ಪಿಟಿಐ): ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಧ್ರುವ್ ನಾರಾಯಣ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಬಿಐ ವಿಶೇಷ ನ್ಯಾಯಾಲಯವು ತನಿಖಾ ತಂಡಕ್ಕೆ ಶುಕ್ರವಾರ ಅನುಮತಿ ನೀಡಿದೆ.ವಾಸ್ತುಶಿಲ್ಪಿ ಜಹೀದಾ ಪರ್ವೇಜ್, ಸಾಕಿಬ್ ಅಲಿ, ಸಾಬಾ ಫರೂಕಿ ಹಾಗೂ ಧ್ರುವ್ ನಾರಾಯಣ್ ಸೇರಿದಂತೆ ಎಲ್ಲ ಶಂಕಿತರನ್ನೂ ಸುಳ್ಳು ಪತ್ತೆ ಪರೀಕ್ಷೆಗೆ ಒಳಡಪಡಿಸಲು ಕೋರ್ಟ್ ಅನುಮತಿ ಕೇಳಲಾಗಿತ್ತು ಎಂದು ಸಿಬಿಐ ಮೂಲಗಳು ಹೇಳಿವೆ.ಈ ಪರೀಕ್ಷೆಗೆ ಸಿಂಗ್ ಒಪ್ಪಿಗೆ ನೀಡಿದ್ದಾರೆ. ಈ ನಡುವೆ ಸಿಬಿಐ, ಶುಕ್ರವಾರ ಇನ್ನೊಬ್ಬ ಆರೋಪಿ ಇರ್ಫಾನ್‌ನನ್ನು ಕೋರ್ಟ್ ಮುಂದೆ ಹಾಜರುಪಡಿಸಿತು. ಇದೇ 16ವರೆಗೆ ಕೋರ್ಟ್ ಈತನನ್ನು ಸಿಬಿಐ ಸುಪರ್ದಿಗೆ ಒಪ್ಪಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.