ಬುಧವಾರ, ಜೂನ್ 16, 2021
23 °C

ಶೇಂಗಾ ಬೆಲೆ ದಿಢೀರ್‌ ಕುಸಿತ: ರೈತ ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನಿಂದ ವಿವಿಧ ಗ್ರಾಮಗಳಿಂದ ಶೇಂಗಾವನ್ನು ಮಾರಾಟ ಮಾಡಲು ಸೋಮವಾರ ಎಪಿಎಂಸಿ ಮಾರುಕಟ್ಟೆಗೆ ತಂದಾಗ ರೈತರಿಗೆ ಅಘಾತ ಕಾದಿತ್ತು. ಶೇಂಗಾ­ವನ್ನು ಕೇವಲ ₨1800 ಖರೀದಿಸಲು ವ್ಯಾಪಾರಸ್ಥರು ಮುಂದಾದಾಗ ರೈತರು ಪ್ರತಿಭಟನೆಗೆ ಇಳಿದರು.ಪ್ರಾಂಗಣಕ್ಕೆ ಸಾಕಷ್ಟು ಶೇಂಗಾ ಬಂದರೂ ಸಹ ವ್ಯಾಪಾರಸ್ಥರು ಆವಕ ಕಡಿಮೆ ತೋರಿಸಿ ಎಪಿಎಂಸಿಗೆ ಮೋಸ ಮಾಡುವುದರ ಜೊತೆಯಲ್ಲಿ ಕೃತಕ ಬೆಲೆ ಕುಸಿತವನ್ನು ಉಂಟು ಮಾಡಿ­ದ್ದಾರೆ. ಅನಾವಶ್ಯಕವಾಗಿ ಬೆಲೆ ಕುಸಿ­ತಕ್ಕೆ ವ್ಯಾಪಾರಸ್ಥರು ನೇರ ಹೊಣೆ­ಯಾಗಿದ್ದಾರೆ ಎಂದು ಪ್ರಾಂತ ರೈತ ಸಂಘದ ಮುಖಂಡರು ಆರೋಪಿಸಿದರು.ಸರ್ಕಾರ ಮಧ್ಯೆ ಪ್ರವೇಶ ಮಾಡಿ ತಕ್ಷಣ ಬೆಂಬಲ ಬೆಲೆ ನೀಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಇ.ಟೆಂಡರ್ ಕರೆಯಬೇಕು. ವ್ಯಾಪಾ­ರಸ್ಥ ಪ್ರತಿನಿಧಿ ಮಗನಲಾಲ್‌ ಅವರು ಕೃತಕ ಬೆಲೆ ಕುಸಿತಕ್ಕೆ ಹೊಣೆಯಾ­ಗಿದ್ದು, ತಕ್ಷಣ ಅವರ ಸದಸ್ಯತ್ವ ಹಾಗೂ ಪರವಾನಿಗೆ ರದ್ದುಪಡಿಸಬೇಕು ಎಂದು ರೈತ ಮುಖಂಡ ದಾವಲಸಾಬ್ ನದಾಫ್‌ ಆಗ್ರಹಿಸಿದರು.ಮಲ್ಲಣ್ಣಗೌಡ ಮಾಲಿಪಾಟೀಲ್‌, ಜೈಲಾಲ ತೋಟದಮನೆ, ನಿಂಗಪ್ಪ ಬೋನಾಳ, ಮಹಿಬೂಬು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.