ಬುಧವಾರ, ಜೂನ್ 23, 2021
29 °C

ಶೇಷಶಾಸ್ತ್ರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೇಷಶಾಸ್ತ್ರಿಗೆ ಸನ್ಮಾನ

ಕನ್ನಡ ಗೆಳೆಯರ ಬಳಗ: ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ. ಡಾ.ಆರ್. ಶೇಷಶಾಸ್ತ್ರಿ-60 ವಿಚಾರ ಸಂಕಿರಣ ಶೇಷ ಶಾಸ್ತ್ರಿ: ಬದುಕು-ಬರಹ.    ಚಿಂತಾಮಣಿಯ ಕಲ್ಲಹಳ್ಳಿಯವರಾದ ಶೇಷಶಾಸ್ತ್ರಿ ಅವರು ಕಲ್ಲಹಳ್ಳಿಯಲ್ಲಿ ಪ್ರೌಢಶಾಲೆ ಮುಗಿಸಿದರು. ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ ಪಡೆದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆ ಆರಂಭಿಸುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶಿಸಿದರು.ಡಾ.ಚಿದಾನಂದಮೂರ್ತಿ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ವಿ.ವಿಗೆ `ಕರ್ನಾಟಕದ ವೀರಗಲ್ಲುಗಳು~ ಎಂಬ ಮೌಲಿಕ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪಡೆದರು.ಆಂಧ್ರ ಜಿಲ್ಲೆ ಅನಂತಪುರದ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದಾ ಹಸನ್ಮುಖಿ, ವಿನೋದದಿಂದ ಇರುತ್ತಿದ್ದ ಶೇಷಶಾಸ್ತ್ರಿಗಳ ಜೀವನ, ಸಂಶೋಧನೆಯಲ್ಲಿನ ಅವರ ಸಾಧನೆ ಯುವ ಜನಾಂಗಕ್ಕೆ ಆದರ್ಶವಾಗಿದೆ.ಉದ್ಘಾಟನೆ: ಪ್ರೊ.ಎಂ.ಕೆ.ಎಲ್.ಎನ್.ಶಾಸ್ತ್ರಿ. ಬದುಕು, ಶಾಸನ ಸಾಹಿತ್ಯ: ಡಾ.ದೇವರಕೊಂಡಾರೆಡ್ಡಿ. ಶಾಸನೇತರ ಸಾಹಿತ್ಯ: ಡಾ.ಕೆ.ಆರ್.ಗಣೇಶ. ಹಿರಿಯ ಕಥೆಗಾರ ಕೆ.ಎನ್.ಭಗವಾನ್ ಅವರ `ನಾಲ್ಕು ದಶಕದ ಕಥೆಗಳು~ ಕೃತಿ ಲೋಕಾರ್ಪಣೆ. ಮಧ್ಯಾಹ್ನ 3.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.