ಶೇ 23ರಷ್ಟು ಚೀನಿಯರಿಗೆ ಭಾರತ ಇಷ್ಟ!

7

ಶೇ 23ರಷ್ಟು ಚೀನಿಯರಿಗೆ ಭಾರತ ಇಷ್ಟ!

Published:
Updated:

ವಾಷಿಂಗ್ಟನ್ (ಪಿಟಿಐ): ಅಭಿವೃದ್ಧಿ ಹೊಂದುತ್ತಿರುವ ಭಾರತದ ಆರ್ಥಿಕತೆಯತ್ತ ವಿಶ್ವದ ಕಣ್ಣು ನೆಟ್ಟಿದ್ದರೂ ಚೀನಾದಲ್ಲಿ ಬಹುತೇಕರು ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.`ಚೀನಾದಲ್ಲಿ ಶೇ 23 ರಷ್ಟು ಮಂದಿ ಮಾತ್ರ ಭಾರತದ ಬಗ್ಗೆ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದು, ಶೇ 62ರಷ್ಟು ಮಂದಿ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ~ ಎಂದು ವಾಷಿಂಗ್ಟನ್ ಮೂಲದ ಪೀವ್ ರೀಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆಯಲ್ಲಿ ಹೇಳಲಾಗಿದೆ.`ಭಾರತದ ಆರ್ಥಿಕತೆಯಿಂದ ಚೀನಾಕ್ಕೆ ಉತ್ತಮ ಅವಕಾಶಗಳು ದೊರೆಯಲಿವೆ ಎಂದು ಕೇವಲ ಶೇ 44ರಷ್ಟು ಮಂದಿ ಮಾತ್ರ ಅಭಿಪ್ರಾಯಪಟ್ಟಿದ್ದಾರೆ~ ಎಂದು ಸಮೀಕ್ಷೆ ತಿಳಿಸಿದೆ.ಚೀನಾದ ಆರ್ಥಿಕತೆ ಕುರಿತು ಭಾರತದಲ್ಲಿ ಅಷ್ಟೇನು ಉತ್ತಮ ಅನಿಸಿಕೆ ವ್ಯಕ್ತವಾಗಿಲ್ಲ. ಶೇ 24ರಷ್ಟು ಮಂದಿ ಮಾತ್ರ ಚೀನಾದ ಆರ್ಥಿಕಾಭಿವೃದ್ಧಿಯು ಭಾರತಕ್ಕೆ ವರದಾನವಾಗಿದೆ ಎಂದು ತಿಳಿಸಿದ್ದಾರೆ.ಭಾರತಕ್ಕೆ ಹೋಲಿಸಿದರೆ ಚೀನಾದವರು ಪಾಕಿಸ್ತಾನದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ ಎನ್ನುವುದನ್ನು ಸಮೀಕ್ಷೆ ಹೇಳಿದೆ. ಪಾಕ್‌ನೊಂದಿಗಿನ ಚೀನಾದ ಸಂಬಂಧ ಅತ್ಯುತ್ತಮವಾಗಿದೆ. ಚೀನಾದಲ್ಲಿ ಶೇ 49ರಷ್ಟು ಮಂದಿ ಈ ಸಂಬಂಧವನ್ನು ಪರಸ್ಪರ ಸಹಕಾರ ಎಂದು ಬಣ್ಣಿಸಿದರೆ, ಶೇ 10ರಷ್ಟು ಜನರು ಇದನ್ನು ವೈರತ್ವ ಎಂದು ಹೇದ್ದಾರೆ. ಇನ್ನು ಶೇ 48ರಷ್ಟು ಚೀನಿಯರು ರಷ್ಯಾದ ಬಗ್ಗೆ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry