ಶೇ 2.6ರಷ್ಟು ಹೆಚ್ಚಲಿದೆ ಇಂಗಾಲಾಮ್ಲ

7

ಶೇ 2.6ರಷ್ಟು ಹೆಚ್ಚಲಿದೆ ಇಂಗಾಲಾಮ್ಲ

Published:
Updated:

ಲಂಡನ್ (ಐಎಎನ್‌ಎಸ್): ಈ ವರ್ಷಾಂತ್ಯದ ಒಳಗಾಗಿ ಜಗತ್ತಿನಲ್ಲಿ ಇಂಗಾಲದ ಡೈ ಆಕ್ಸೈಡ್ ಉಗುಳುವಿಕೆ ಪ್ರಮಾಣ ಶೇ 2.6ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣ 3650 ಕೋಟಿ ಟನ್‌ಗೆ ತಲುಪಲಿದೆ ಎಂದೂ ಹೇಳಿದೆ. ಅಂದರೆ, ಇಂಗಾಲದ ಹೊರಸೂಸುವಿಕೆಯು ಕ್ಯೋಟೊ ಪ್ರೊಟೊಕಾಲ್‌ನ ಎಲ್ಲೆಗೆರೆಗಿಂತ ಶೇ 58ರಷ್ಟು ಹೆಚ್ಚಳವಾಗಲಿದೆ.

ಬ್ರಿಟನ್ನಿನ ಯೂನಿವರ್ಸಿಟಿ ಆಫ್ ನಾರ್ತ್ ಅಂಗ್ಲಿಯಾದ (ಯುಇಎ) ತಾಪಮಾನ ಏರಿಕೆ ಸಂಶೋಧನಾ ಕೇಂದ್ರದ ಅಧ್ಯಯನಕಾರರು ನಡೆಸಿದ ಜಾಗತಿಕ ಇಂಗಾಲ ಕಾರ್ಯಕ್ರಮದಲ್ಲಿ  (ಜಿಸಿಪಿ) ಈ ವಿಚಾರ ಈ ಬಹಿರಂಗಗೊಂಡಿದೆ.

ಚೀನಾ (ಶೇ 28) ಅಮೆರಿಕ (ಶೇ 16), ಐರೋಪ್ಯ ಒಕ್ಕೂಟ (ಶೇ 11) ಮತ್ತು ಭಾರತವು (ಶೇ 7) ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ಹೊರಸೂಸಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

2011ರಲ್ಲಿ ಇಂಗಾಲದ ಹೊರಸೂಸುವಿಕೆ ಪ್ರಮಾಣ ಚೀನಾದಲ್ಲಿ ಶೇ 9.9ರಷ್ಟು ಮತ್ತು ಭಾರತದಲ್ಲಿ ಶೇ 7.5ರಷ್ಟು ಹೆಚ್ಚಳವಾಗಿದೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದಲ್ಲಿ ಈ ಪ್ರಮಾಣದಲ್ಲಿ ಶೇ 1.8 ಮತ್ತು ಶೇ 2.8ರಷ್ಟು ಕಡಿಮೆಯಾಗಿದೆ ಎಂದು ಯುಇಎ ಹೇಳಿಕೆ ತಿಳಿಸಿದೆ.

ವಿಜ್ಞಾನಿ ಎಚ್ಚರಿಕೆ (ಪಿಟಿಐ ವರದಿ): ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ವಿಜ್ಞಾನಿ ಪೆಪ್ ಕೆನಡಲ್, 2100ರ ವೇಳೆಗೆ ಜಾಗತಿಕ ಉಷ್ಣತೆ 4-6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಲಿದೆ ಎಂದು ಎಚ್ಚರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry