ಶೇ 42ರಷ್ಟು ಆದಾಯ ಸಿಬ್ಬಂದಿಗೆ

7

ಶೇ 42ರಷ್ಟು ಆದಾಯ ಸಿಬ್ಬಂದಿಗೆ

Published:
Updated:

ನವದೆಹಲಿ (ಪಿಟಿಐ):  ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊಂದಿರುವ  ಬೃಹತ್ ಕ್ಷೇತ್ರವಾದ ಭಾರತೀಯ ರೈಲ್ವೆ ತನ್ನ ಆದಾಯದಲ್ಲಿ ಶೇಕಡಾ 42ರಷ್ಟನ್ನು ಉದ್ಯೋಗಿಗಳ ಸಂಬಳ ಮತ್ತು ಭತ್ಯೆಗಾಗಿ ಖರ್ಚು ಮಾಡುತ್ತಿದೆ. ಬಹುತೇಕ ಮೂರನೇ ಎರಡರಷ್ಟು ಆದಾಯವು ರೈಲ್ವೆ ಸರಕು ಸಾಗಣೆ ಮೂಲದಿಂದಲೇ ಬರುತ್ತಿದೆ ಎನ್ನುವುದು ವಿಶೇಷ.ರೈಲ್ವೆ ಇಲಾಖೆಯ ಎಲ್ಲ ವಿಭಾಗಗಳ ಆದಾಯ ಮತ್ತು ಖರ್ಚನ್ನು ರೂಪಾಯಿಯ ಲೆಕ್ಕದಲ್ಲಿ ಅಳೆದರೆ; 2009-10ರಲ್ಲಿ ಪ್ರತಿಯೊಂದು ವಿಭಾಗದಲ್ಲಿ ಬಂದ ಆದಾಯದಲ್ಲಿ ಶೇಕಡಾ 42ರಷ್ಟು ಪೈಸೆಯನ್ನು ಸಿಬ್ಬಂದಿಯ ಸಂಬಳ ಮತ್ತು ಭತ್ಯೆಗಳಿಗಾಗಿ ವಿನಿಯೋಗಿಸಲಾಗುತ್ತಿದೆ. ಇತರೆ ಶೇಕಡಾ 17 ಪೈಸೆಯಷ್ಟನ್ನು ಪಿಂಚಣಿ ನಿಧಿಯ ಬಳಕೆಗಾಗಿ ಖರ್ಚು ಮಾಡಲಾಗುತ್ತಿದೆ.ಖರ್ಚಿನ ಮೂರನೇ ದೊಡ್ಡ ವಿಭಾಗ ಎಂದರೆ ಇಂಧನ. 2009-10ರ ಸಾಲಿನಲ್ಲಿ ಆದಾಯದ ಶೇಕಡ 16ರಷ್ಟು ಪ್ರಮಾಣವನ್ನು ರೈಲ್ವೆಯ ಇಂಧನಕ್ಕಾಗಿಯೇ ಖರ್ಚು ಮಾಡಲಾಗಿದೆ.ಸರಕು ಸಾಗಣೆ ಮೂಲದಿಂದ ಶೇಕಡಾ 65 ಪೈಸೆಯಷ್ಟು ಆದಾಯ ಗಳಿಕೆಯಾಗಿದ್ದರೆ ಪ್ರಯಾಣಿಕರ ಮೂಲದಿಂದ ಶೇಕಡಾ 26ರಷ್ಟು ಪೈಸೆ ಆದಾಯ ಹರಿದು ಬಂದಿದೆ.ಪ್ರಸಕ್ತ ವರ್ಷದಲ್ಲಿ ಸರಕು ಸಾಗಣೆ ಮೂಲದಿಂದ 62,489.33 ಕೋಟಿ ರೂಪಾಯಿಗಳ ಆದಾಯ ಹೊಂದಲಾಗಿದ್ದರೆ 2011-12ರಲ್ಲಿ 68,620 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸಲಾಗಿದೆ. ಸರಕು ಸಾಗಣೆಯಲ್ಲಿ ಹೆಚ್ಚಿನ ಆದಾಯ ಹರಿದು ಬಂದಿರುವುದು ಕಲ್ಲಿದ್ದಲು ಸಾಗಣೆಯಿಂದ. 2009-10ರಲ್ಲಿ ಕಲ್ಲಿದ್ದಲು ಸಾಗಣೆಯಿಂದ 24,127.77 ಕೋಟಿ ರೂಪಾಯಿ ಲಾಭ ಬಂದಿದ್ದರೆ, ಸಿಮೆಂಟ್‌ನಿಂದ 5,668.27 ಕೋಟಿ, ಆಹಾರ ಧಾನ್ಯಗಳ ಸಾಗಾಟದಿಂದ 4,358.82 ಕೋಟಿ, ರಸಗೊಬ್ಬರದಿಂದ 3,606.37 ಕೋಟಿ, ಪೆಟ್ರೋಲಿಯಂ ಉತ್ಪನ್ನಗಳಿಂದ 3,473.20 ಕೋಟಿ ಹಾಗೂ ಕಂಟೇನರ್ ಸೇವೆಗಳಿಂದ 3,208.67 ಕೋಟಿ ರೂಪಾಯಿ ಲಾಭ ಹರಿದು ಬಂದಿದೆ. ಪ್ರಯಾಣಿಕರ ವಿಭಾಗದಲ್ಲಿ ಪ್ರಸಕ್ತ ವರ್ಷ 26,126.47 ಕೋಟಿ ರೂಪಾಯಿ ಲಾಭ ಬಂದಿದ್ದರೆ 2011-12ರಲ್ಲಿ 30,456 ಕೋಟಿ ರೂಪಾಯಿಗಳನ್ನು ನಿರೀಕ್ಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry