ಭಾನುವಾರ, ಮೇ 9, 2021
20 °C

ಶೇ 47.75ರಷ್ಟು ಬಿತ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: 2013-14 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 52,915 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಉತ್ತಮ ಮಳೆಯಿಂದಾಗಿ 25,265 ಹೆಕ್ಟೇರ್ ಅಂದರೆ ಶೇ 47.75 ರಷ್ಟು ಬಿತ್ತನೆಯಾಗಿದೆ.ರೈತ ಸಂಪರ್ಕ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಗೊಬ್ಬರಗಳ ದಾಸ್ತಾನು ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗನಗೌಡ ರಡ್ಡಿ ಹೇಳಿದರು.ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ 2013-14 ನೇ ಸಾಲಿನ ಕೃಷಿಕ ಸಮಾಜದ ಡೈರಿ ಬಿಡುಗಡೆ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.ಈ ತಿಂಗಳ ವಾಡಿಕೆ  ಮಳೆಯು 69.00 ಮಿ.ಮೀ ಇದ್ದು 5 ಮಳೆ ಮಾಪನ ಕೇಂದ್ರಗಳಲ್ಲಿ 65.57 ಮಿ.ಮೀ. ಮಳೆಯಾಗಿರುತ್ತದೆ, ತಾಲ್ಲೂಕಿನ ರೈತರು ಸಕಾಲಕ್ಕೆ ಬಿತ್ತನೆ ಬೀಜ ಖರೀದಿಸಿ ಮುಂಗಾರು ಬಿತ್ತನೆ ಮಾಡುವಂತೆ ತಿಸಿದರು.ಇದೇ ಸಂದರ್ಭದಲ್ಲಿ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.ಕೃಷಿಕ ಸಮಾಜದ ಹಾವೇರಿ ಜಿಲ್ಲಾ ರಾಜ್ಯ ಪ್ರತಿನಿಧಿ ಮತ್ತು ತಾಲ್ಲೂಕು ಅಧ್ಯಕ್ಷ ಎಂ.ಎಚ್.ಪಾಟೀಲ ಕೃಷಿಕ ಸಮಾಜದ ಡೈರಿ ಬಿಡುಗಡೆ ಮಾಡಿದರು.ಡಿ.ಜಿ. ಬಸವರಡ್ಡಿ ಅಜರಡ್ಡಿ, ಶಿವಾನಂದ ಹಾವೇರಿ, ಅಂದಾನಪ್ಪ ಅಸುಂಡಿ, ಡಾ. ಪರಮೇಶ ಹುಬ್ಬಳ್ಳಿ, ಮಂಜುಳಾ ಬಣಕಾರ ಮತ್ತು ಸಮಿತಿಯ ಜಿಲ್ಲಾ ಪ್ರತಿನಿಧಿಗಳು ಹಾಗೂ ಸಮಿತಿಯ ಸದಸ್ಯರು ಹಾಗೂ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.