ಶೇ 50ರಷ್ಟು ಬಿಪಿಎಲ್ ಕಾರ್ಡ್ ರದ್ದು: ಆಕ್ರೋಶ

7

ಶೇ 50ರಷ್ಟು ಬಿಪಿಎಲ್ ಕಾರ್ಡ್ ರದ್ದು: ಆಕ್ರೋಶ

Published:
Updated:
ಶೇ 50ರಷ್ಟು ಬಿಪಿಎಲ್ ಕಾರ್ಡ್ ರದ್ದು: ಆಕ್ರೋಶ

ಮಡಿಕೇರಿ: ಜಿಲ್ಲೆಯಲ್ಲಿ ಶೇಕಡ 50 ರಷ್ಟು ಬಿಪಿಲ್ ಕಾರ್ಡ್ ರದ್ದಾಗಿವೆ. ಇದರಿಂದ ಬಡಜನತೆ ಕಷ್ಟಪಡುವ ಪರಿಸ್ಥಿತಿ ಎದುರಾಗ್ದ್ದಿದು, ಇದಕ್ಕೆಲ್ಲಾ ಬಿಜೆಪಿ ಸರ್ಕಾರದ ವೈಫಲ್ಯವೇ ಕಾರಣ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ.ಟಿ. ಪ್ರದೀಪ್ ಆರೋಪಿಸಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಜನರ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಹೆಚ್ಚು ಬೆಲೆ ನೀಡಿ ಆಹಾರ ಪದಾರ್ಥಗಳನ್ನು ಕೊಳ್ಳುವ ಶಕ್ತಿ ಇಲ್ಲದ ಬಡಜನತೆಯ ಬದುಕು ಶೋಚನೀಯವಾಗಿದೆ ಎಂದರು. ಶಾಸಕರು ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಶೀಘ್ರವೇ ಕ್ರಮ ವಹಿಸದಿದ್ದಲ್ಲಿ, ಜಿಲ್ಲೆಯ ಮೂರು ತಾಲ್ಲೂಕು ಕೇಂದ್ರ ಕಚೇರಿಗಳಲ್ಲಿ ಮುಂದಿನ ವಾರದಿಂದಲೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ರಸ್ತೆ ಕಾಮಗಾರಿ ಕಳಪೆ: ನಾಲ್ಕೂವರೆ ವರ್ಷದ ಆಡಳಿತಾವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸದ ಬಿಜೆಪಿ ಸರ್ಕಾರ, ಇದೀಗ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಳಪೆ ಗುಣಮಟ್ಟದಲ್ಲಿ ರಸ್ತೆ ಕಾಮಗಾರಿಯನ್ನು ಭರದಿಂದ ನಡೆಸುತ್ತಿದೆ ಎಂದು ಆರೋಪಿಸಿದರು.ರಸ್ತೆ ಕಾಮಗಾರಿ ನಡೆಸುತ್ತಿರುವ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರೇ ಆಗಿದ್ದು, ಜನರ ಹಣ ಪೊಲಾಗದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚರವಹಿಸಬೇಕೆಂದು ಆಗ್ರಹಿಸಿದರು.ಬತ್ತ ಖರೀದಿಗೆ ಆಗ್ರಹ: ಜಿಲ್ಲೆಯಲ್ಲಿ ಹಲವು ವಾರಗಳಿಂದ ಬತ್ತ ಕಟಾವು ಕೆಲಸ ನಡೆಯುತ್ತಿದ್ದರು, ಇದುವರೆಗೂ ಎಪಿಎಂಸಿ ಯಾರ್ಡ್‌ಗಳಲ್ಲಿ ಬತ್ತ ಖರೀದಿ ಆರಂಭಿಸಿಲ್ಲ. ಇದರ ಹಿಂದೆ ಸರ್ಕಾರಿ ಮತ್ತು ವ್ಯಾಪಾರಿಗಳ ನಡುವೆ ಹೊಂದಾಣಿಕೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಬತ್ತಕ್ಕೆ ರೂ. 1,200 ಬೆಂಬಲ ಬೆಲೆ ನೀಡಿದ್ದು, ಇದಕ್ಕೆ  ರಾಜ್ಯ ಸರ್ಕಾರವು ಮತ್ತಷ್ಟು ಸಹಾಯ ಧನ ನೀಡಿ, ಶೀಘ್ರವೇ ಎಪಿಎಂಸಿ ಯಾರ್ಡ್‌ಗಳಲ್ಲಿ ಬತ್ತ ಖರೀದಿಸುವಂತೆ ಒತ್ತಾಯಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry