ಮಂಗಳವಾರ, ಏಪ್ರಿಲ್ 20, 2021
24 °C

ಶೇ 68ಕ್ಕೆ ಇಳಿದ ವಿತ್ತೀಯ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉತ್ತಮ ಆರ್ಥಿಕ ಪ್ರಗತಿ ಕಂಡುಬರುತ್ತಿರುವ  ಹಿನ್ನೆಲೆಯಲ್ಲಿ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಫೆಬ್ರುವರಿ ಅವಧಿಯ ಕೇಂದ್ರ ವಿತ್ತೀಯ ಕೊರತೆ ಶೇ 68.6ಕ್ಕೆ ಇಳಿದಿದೆ. ಕಳೆದ ಅವಧಿಯಲ್ಲಿ ವಿತ್ತೀಯ ಕೊರತೆ ಶೇ 92ರಷ್ಟಿತ್ತು. ಈ ಅವಧಿಯಲ್ಲಿ ಹಣಕಾಸು ಕೊರತೆ  ರೂ. 3.80 ಲಕ್ಷ ಕೋಟಿಯಿಂದ ರೂ.2.75 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.ಸರ್ಕಾರದ ನಿವ್ವಳ ತೆರಿಗೆ ಸಂಗ್ರಹ ರೂ.4.60 ಲಕ್ಷ ಕೋಟಿಗೆ ಏರಿದ್ದು,  ಒಟ್ಟು ವೆಚ್ಚ ರೂ.9.78 ಕೋಟಿಯಷ್ಟಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ‘3ಜಿ’ ಮತ್ತು ‘ಬಿಡ್ಲ್ಯುಎ’ ತರಂಗಾಂತರ ಹಂಚಿಕೆಯಿಂದ ನಿರೀಕ್ಷೆಗೂ ಮೀರಿದ ವರಮಾನ ಸಂಗ್ರಹಗೊಂಡ ಹಿನ್ನೆಲೆಯಲ್ಲಿ ಹಣಕಾಸು ಕೊರತೆ ಶೇ 5.1ಕ್ಕೆ ಇಳಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಈ ವರ್ಷದ ಬಜೆಟ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು. ತರಂಗಾಂತರ ಹಂಚಿಕೆಯಿಂದ ರೂ.1.08ಲಕ್ಷ ಕೋಟಿ ವರಮಾನ ಸಂಗ್ರವಾದ ಹಿನ್ನೆಲೆಯಲ್ಲಿ ಒಟ್ಟು ತೆರಿಗೆಯೇತರ ವರಮಾನ  ಏರಿಕೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.