ಶೇ 8ರಷ್ಟು ಜಿಡಿಪಿ ನಿರೀಕ್ಷೆ: ರಂಗರಾಜನ್

7

ಶೇ 8ರಷ್ಟು ಜಿಡಿಪಿ ನಿರೀಕ್ಷೆ: ರಂಗರಾಜನ್

Published:
Updated:

ನವದೆಹಲಿ (ಪಿಟಿಐ): ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಮುಂದಿನ ಹಣಕಾಸು ವರ್ಷದಲ್ಲಿ ಶೇ 7.5ರಿಂದ ಶೇ 8ರಷ್ಟು ಪ್ರಗತಿ ದಾಖಲಿಸಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಂದಾಜಿಸಿದೆ.ಜಾಗತಿಕ ಆರ್ಥಿಕ ಬಿಕಟ್ಟು ತಗ್ಗಿದರೆ, ಗರಿಷ್ಠ ಮಟ್ಟದಲ್ಲಿ ವೃದ್ಧಿ ದರ ಚೇತರಿಸಿಕೊಳ್ಳಲಿದೆ ಎಂದು ಸಲಹಾ ಸಮಿತಿಯ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಅಂಕಿ ಅಂಶಗಳ ಸಂಸ್ಥೆ (ಸಿಎಸ್‌ಒ) ಇತ್ತೀಚೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ `ಜಿಡಿಪಿ~ ಶೇ 6.9ಕ್ಕೆ ಇಳಿಕೆಯಾಗಲಿದೆ ಎಂದು ಹೇಳಿತ್ತು. ದೇಶದ ವಿತ್ತೀಯ ಕೊರತೆ ಅಂತರವು ಬಜೆಟ್‌ನಲ್ಲಿ ಅಂದಾಜಿಸಿರುವುದಕ್ಕಿಂತಲೂ ಹೆಚ್ಚಿರುವುದು `ಜಿಡಿಪಿ~ ಕುಸಿಯಲು ಮುಖ್ಯ ಕಾರಣ ಎಂದು ಹೇಳಿತ್ತು.

 

ವೃದ್ಧಿ `ಸದ್ಯದ ಪರಿಸ್ಥಿತಿಯಲ್ಲಿ ಸುಸ್ಥಿರ ಪ್ರಗತಿ ದಾಖಲಿಸುವ ಅಗತ್ಯವಿದೆ. ಜಾಗತಿಕ ಆರ್ಥಿಕ ಹಿಂಜರಿತದ ಮೊದಲು `ಜಿಡಿಪಿ~ ಶೇ 9ರಷ್ಟಿತ್ತು. ಪ್ರಸಕ್ತ ವರ್ಷ ಶೇ 7.1ರಷ್ಟು `ಜಿಡಿಪಿ~ ದಾಖಲಾಗಲಿದೆ ಎಂದು ರಂಗರಾಜನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry