ಬುಧವಾರ, ಏಪ್ರಿಲ್ 21, 2021
24 °C

ಶೇ 9.5ರಷ್ಟು ಬಡ್ಡಿ ದರ: ಖಾಸಗಿ ಭವಿಷ್ಯ ನಿಧಿ ಟ್ರಸ್ಟ್ ಗಳಿಗೆ ಹೊರೆಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಖಾಸಗಿ ಭವಿಷ್ಯ ನಿಧಿ ಟ್ರಸ್ಟ್‌ಗಳ ಬಳಿ ಹೆಚ್ಚುವರಿ ಹಣ ಸಾಕಷ್ಟು ಪ್ರಮಾಣದಲ್ಲಿದ್ದು, ನೌಕರರ ಭವಿಷ್ಯ ನಿಧಿಯ ಮೇಲೆ ಶೇ 9.5ರಷ್ಟು ಬಡ್ಡಿ ದರ ನೀಡಲು ಯಾವುದೇ ಸಮಸ್ಯೆ ಇಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ನಡೆಸಿದ ಸಮೀಕ್ಷೆ ತಿಳಿಸಿದೆ.ನೌಕರರ ಭವಿಷ್ಯ ನಿಧಿಯ ಮೇಲೆ ಖಾಸಗಿ ಟ್ರಸ್ಟ್‌ಗಳು ಶೇ 11.5ರಷ್ಟು ಬಡ್ಡಿ ದರ ನೀಡಬಹುದು. ಅಷ್ಟೊಂದು ಪ್ರಮಾಣದ ಹೆಚ್ಚುವರಿ ಹಣ ಖಾತೆಯಲ್ಲಿ ಕೊಳೆಯುತ್ತಿದೆ ಎಂದು ‘ಇಪಿಎಫ್‌ಒ’ ವರದಿ ಹೇಳಿದೆ. ಇತ್ತೀಚೆಗೆ ನೌಕರರ ಭವಿಷ್ಯ ನಿಧಿಯ ಮೇಲೆ ಶೇ 9.5ರಷ್ಟು ಬಡ್ಡಿ ದರ ನೀಡಬೇಕೆಂದು ಸೂಚಿಸಿದ ನಂತರ, ಹಲವು ಖಾಸಗಿ ಭವಿಷ್ಯ ನಿಧಿ ಟ್ರಸ್ಟ್‌ಗಳು ಇದರಿಂದ ತಮಗೆ ತೀವ್ರ ನಷ್ಟವಾಗುತ್ತದೆ ಎಂದು ವಾದಿಸಿದ್ದವು. ಇದರ ಸತ್ಯಾಸತ್ಯತೆ ಪರಿಶೀಲಿಸಲು ‘ಇಪಿಎಫ್‌ಒ’ ಖಾಸಗಿ ಟ್ರಸ್ಟ್‌ಗಳ ಭವಿಷ್ಯನಿಧಿ ವರಮಾನದ  ಬಗ್ಗೆ ಸಮೀಕ್ಷೆ ನಡೆಸಿತ್ತು. ‘ಇಪಿಎಫ್‌ಒ’ ಟ್ರಸ್ಟಿ ಹಾಗೂ ಭಾರತೀಯ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶರದ್ ಪಾಟೀಲ್ ನೇತೃತ್ವದಲ್ಲಿ ಈ ಸಮೀಕ್ಷೆ ನಡೆದಿದ್ದು, ಖಾಸಗಿ ಭವಿಷ್ಯ ನಿಧಿ ಟ್ರಸ್ಟ್‌ಗಳ ಅಮಾನತು ಖಾತೆಯಲ್ಲಿ ರೂ.1,731 ಕೋಟಿ ಹೆಚ್ಚುವರಿ  ಹಣ ಇರುವುದು ಪತ್ತೆಯಾಗಿದೆ. ದೇಶದ 42 ಖಾಸಗಿ ಭವಿಷ್ಯ ನಿಧಿ ಟ್ರಸ್ಟ್‌ಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ  2 ಟ್ರಸ್ಟ್‌ಗಳು ಮಾತ್ರ ಶೇ 9.5ರಷ್ಟು ಬಡ್ಡಿ ದರ ನೀಡಲು ಅಲ್ಪಮಟ್ಟಿಗಿನ ಹಣಕಾಸಿನ ಸಮಸ್ಯೆ ಎದುರಿಸುತ್ತಿವೆ.‘ಟಾಟಾ ಕೆಮಿಕಲ್ಸ್’ ತನ್ನ ಭವಿಷ್ಯ ನಿಧಿ ಖಾತೆಯಲ್ಲಿ ಕೊಳೆಯುತ್ತಿರುವ ಹೆಚ್ಚುವರಿ  ರೂ.264 ಲಕ್ಷ ವರಮಾನದ ಕುರಿತು ನಿಖರವಾದ ಮಾಹಿತಿ ನೀಡಿದೆ.  ‘ಸಿಪ್ಲಾ’ ಲಿಮಿಟೆಡ್ ತನ್ನ ಖಾತೆಯಲ್ಲಿ ಹೆಚ್ಚುವರಿ ಹಣ  ಇಲ್ಲ ಎಂದು ವರದಿ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.