ಶೈಕ್ಷಣಿಕ ಕ್ಷೇತ್ರಕ್ಕೆ ಆಜಾದ್ ಭದ್ರ ಬುನಾದಿ
ಕನಕಗಿರಿ: ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಸಲ ಸೆರೆಮನೆ ವಾಸ ಅನುಭವಿಸಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಉಪ ಪ್ರಾಂಶುಪಾಲ ಎಚ್. ಕೆ, ಚಂದ್ರಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವತಿಯಿಂದ ಭಾನುವಾರ ಕೇಂದ್ರ ಸರ್ಕಾರದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆ (ರಾಷ್ಟ್ರೀಯ ಶಿಕ್ಷಣ ದಿನಾಚರಣೆ)ಯಲ್ಲಿ ಅವರು ಮಾತನಾಡಿದರು.
ಹಿರಿಯ ಶಿಕ್ಷಕರಾದ ಪ್ರಭಾಕರ ಬಡಿಗೇರ, ಹನುಮಂತಪ್ಪ ಚವ್ಹಾಣ, ತಿಪ್ಪಣ್ಣ, ರಾಜಾನಾರಾಯಣ ಅರಳಿಕಟ್ಟಿ, ಕೆ.ಪಿ ಶೈಲಾ, ಶರಣೆಗೌಡ, ಶಿವಲಿಂಗ ಇತರರು ಹಾಜರಿದ್ದರು.
ಶಿಕ್ಷಕ ಶಾಮೀದಸಾಬ ಲೈನದಾರ ಸ್ವಾಗತಿಸಿದರು. ಮಂಜುನಾಥ ಪಾಟೀಲ ನಿರೂಪಿಸಿದರು. ಪರಸಪ್ಪ ಹೊರಪೇಟೆ ವಂದಿಸಿದರು.
ಉರ್ದು ಶಾಲೆ: ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿಯೂ ಸಹ ಭಾನುವಾರ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಎಸ್ಡಿಎಂಸಿ ಅಧ್ಯಕ್ಷ ಹೊನ್ನೂರುಸಾಬ ಕಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮೈಬೂಬಬೀ ಬಾಷಸಾಬ, ಸದಸ್ಯರಾದ ಮಹ್ಮದರಫಿ ಹೂಗಾರ, ಮೈಬೂಬಸಾಬ ಕಲೆಗಾರ, ಮಹ್ಮದ ಅನೀಫ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಇಕ್ಬಾಲ್ಖಾನ್, ಶಿಕ್ಷಕ ಮಹಬೂಬ ಭಾಗವಾನ್ ಇತರರು ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.