ಶೈಕ್ಷಣಿಕ ಕ್ಷೇತ್ರ: ನಗರಕ್ಕೆ ಉನ್ನತ ಸ್ಥಾನ

7

ಶೈಕ್ಷಣಿಕ ಕ್ಷೇತ್ರ: ನಗರಕ್ಕೆ ಉನ್ನತ ಸ್ಥಾನ

Published:
Updated:

ಮಹದೇವಪುರ: ದೇಶದಲ್ಲಿನ ಎಲ್ಲ ನಗರಗಳಿಗಿಂತಲೂ ಬೆಂಗಳೂರು ನಗರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಉನ್ನತ ಸ್ಥಾನದಲ್ಲಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟಿದ್ದಾರೆ.

ಕ್ಷೇತ್ರದ ಬಿದರಹಳ್ಳಿಯ ಈಸ್ಟ್ ಪಾಯಿಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.`ಬೆಂಗಳೂರಿನಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಕಾರಣಕ್ಕಾಗಿ ಬಹುತೇಕ ದೇಶದ ಎಲ್ಲ ರಾಜ್ಯಗಳಿಂದಲೂ ಯುವಕ- ಯುವತಿಯರು ಕರ್ನಾಟಕಕ್ಕೆ ಬರುತ್ತಾರೆ. ಅದಕ್ಕೆ ಕನ್ನಡಿಗರು ತಲೆಬಾಗಬೇಕು. ಅಂತಹ ವಿದ್ಯಾರ್ಥಿಗಳಿಗೆ ಅಗತ್ಯ ಪ್ರೋತ್ಸಾಹ ನೀಡಬೇಕು~ ಎಂದು ಮನವಿ ಮಾಡಿದರು.ಎಂ.ಜಿ. ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಎಂ.ವೆಂಕಟಪತಿ ಮಾತನಾಡಿ, ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಹಾದಿಯನ್ನು ತಾವೇ ರೂಪಿಸಿಕೊಳ್ಳಬೇಕು. ಆ ಮೂಲಕ ರಾಜ್ಯ ಹಾಗೂ ದೇಶಕ್ಕೆ ಉತ್ತಮ ಹೆಸರನ್ನು ತಂದು ಕೊಡಬೇಕು ಎಂದು ಕರೆ ನೀಡಿದರು.ವೇದಿಕೆಯಲ್ಲಿ ಎಂ.ಜಿ.ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕರಾದ ಬಿ.ಐ.ರಮಾದೇವಿ, ಕಾರ್ಯದರ್ಶಿ ಪೀಟರ್ ಫ್ರಾನ್ಸಿಸ್, ಎಸ್.ವಿ. ಪ್ರಮೋದಗೌಡ, ಎಸ್.ವಿ.ರಾಜೀವಗೌಡ, ಡಾ.ಆರ್.ವೆಂಕಟರಾಮ್, ಪ್ರಾಂಶುಪಾಲರಾದ ಡಾ.ಗಿರಿಧರರೆಡ್ಡಿ, ಡಾ.ಬಿ.ಎಂ.ಸತೀಶ ಮತ್ತು ನಿರಂಜನ ಪ್ರಭು ಹಾಜರಿದ್ದರು.ಘಟಿಕೋತ್ಸವದಲ್ಲಿ ಬಿ.ಇ. ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಅವರುಗಳನ್ನು ಗೌರವಿಸಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry