ಶೈಕ್ಷಣಿಕ ಪ್ರಗತಿಗೆ ಸರ್ಕಾರದ ಗಮನ: ಸಚಿವ ರವಿ

7

ಶೈಕ್ಷಣಿಕ ಪ್ರಗತಿಗೆ ಸರ್ಕಾರದ ಗಮನ: ಸಚಿವ ರವಿ

Published:
Updated:

ಚಿಕ್ಕಮಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಿದೆ. ಗ್ರಾಮೀಣ ಪ್ರದೇಶಗಳಲ್ಲೂ ವಸತಿ ನಿಲಯ ಪ್ರಾರಂಭಿಸಿ ಗ್ರಾಮೀಣ ಮಕ್ಕಳಿಗೂ ಸುಲಭವಾಗಿ ಶಿಕ್ಷಣ ದೊರೆಯುವಂತೆ ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಿಳಿಸಿದರು.ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ವಸತಿ ನಿಲಯವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಅಧಿಕಾರ ಪ್ರೀತಿಗಿಂತ ಜನರ ಪ್ರೀತಿ, ವಿಶ್ವಾಸ ಮುಖ್ಯ. ಜನತೆಯ ಪ್ರೀತಿಯಿಂದ ಶಾಸಕನಾಗಿ ಆಯ್ಕೆಯಾದೆ. ಪಕ್ಷವು ಕ್ಷೇತ್ರದಲ್ಲಿ ತಾನು ಮಾಡಿರು ಕೆಲಸ ಮತ್ತು ಸಂಘಟನೆ ಗುರುತಿಸಿ ಸಚಿವ ಸ್ಥಾನ ನೀಡಿದೆ ಎಂದರು.`ಗ್ರಾಮಕ್ಕೆ ವಿದ್ಯಾರ್ಥಿ ನಿಲಯ ಕಲ್ಪಿಸುವಂತೆ ಗ್ರಾಮಸ್ಥರಿಂದ ಬೇಡಿಕೆ ಬಹಳ ದಿನಗಳಿಂದಲೂ ಇತ್ತು. ಅದು ಈಗ ಕಾರ್ಯರೂಪಕ್ಕೆ ಬಂದಿದೆ. ನನ್ನ ಕ್ಷೇತ್ರದಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಿವೆ. ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನಮ್ಮ ಸರ್ಕಾರ ಬಂದ ನಂತರ ಸುವರ್ಣ ಭೂಮಿ ಯೋಜನೆ, ರೈತರ ಖಾತೆಗೆ ನೇರವಾಗಿ 5000 ರೂಪಾಯಿ ಹಾಗೂ ಇತರೆ ರೈತಪರ ಯೋಜನೆಗಳ ಮೂಲಕ ರೈತರಿಗೆ ಅನೇಕ ಅನುಕೂಲ ಮಾಡಿಕೊಡಲಾಗಿದೆ~ ಎಂದರು.ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಾ ಚಂದ್ರಪ್ಪ, ಸದಸ್ಯ ಜೆ.ಡಿ.ಲೋಕೇಶ್, ತಾ.ಪಂ. ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ರೀನು ಶಿವರಾಜ್, ಗ್ರಾ.ಪಂ. ಅಧ್ಯಕ್ಷ ನಿಂಗೇಗೌಡ, ಉಪಾಧ್ಯಕ್ಷೆ ವೆನಿಲಾ ವಿಜಯಕುಮಾರ್, ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಜಗದೀಶ್‌ಕುಮಾರ್, ಬಸವರಾಜ್, ಸಿಯಾರ್ ಆಹ್ಮದ್, ಕೃಷಿ ಪತ್ತಿನ ಸಹಕಾರ ಸಂಘದ ಕುಲಶೇಖರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry