ಮಂಗಳವಾರ, ಏಪ್ರಿಲ್ 13, 2021
25 °C

ಶೈಕ್ಷಣಿಕ ವಿದ್ಯಾರ್ಹತೆ:ಡಿ ಮ್ಯಾಟ್ ಅಂಕಿಅಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಶೈಕ್ಷಣಿಕ ವಿದ್ಯಾರ್ಹತೆ ಅಂಕಿಅಂಶಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ‘ಡಿ ಮ್ಯಾಟ್’ (ವಿದ್ಯುನ್ಮಾನ) ಮಾದರಿಯಲ್ಲಿ ಸಂಗ್ರಹಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡುವ ಮೂಲಕ ಕೇಂದ್ರ ಸರ್ಕಾರ ‘ರಾಷ್ಟ್ರೀಯ ಶೈಕ್ಷಣಿಕ ನ್ಯಾಸ (ಎನ್‌ಎಡಿ) ಮಸೂದೆ- 2011’ಯನ್ನು ಸಂಸತ್‌ನಲ್ಲಿ ಮಂಡಿಸಲು ತನ್ನ ದಾರಿಯನ್ನು ಸುಗಮ ಮಾಡಿಕೊಂಡಿದೆ.

ಎಲ್ಲ ಬಗ್ಗೆಯ ಶಾಲೆ, ಶೈಕ್ಷಣಿಕ ಮಂಡಳಿಗಳು, ಪಾಲಿಟೆಕ್ನಿಕ್‌ಗಳು ಸೇರಿದಂತೆ ಐಐಟಿ, ಎನ್‌ಐಟಿಗಳು ನೀಡುವ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಿಅಂಶಗಳನ್ನು ವಿದ್ಯುನ್ಮಾನ  ಮಾದರಿಯಲ್ಲಿ ಕ್ರೂಡೀಕರಿಸಿ ಅದನ್ನು ಗುರುತಿನ ಸಂಖ್ಯೆ ಮೂಲಕ ದಾಖಲಿಸಲಾಗುವುದು. ಇದರಿಂದ ವಿದ್ಯಾರ್ಹತೆಯ ವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ಪ್ರಮಾಣ ಪತ್ರಗಳನ್ನು ಮತ್ತೆ ನೀಡಲು ಅವಕಾಶವಾಗಲಿದೆ. ಈ ರೀತಿಯಾದ ಅಂಕಿಅಂಶಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಗ್ರಹಿಸುವುದರಿಂದ ನಕಲಿ ಪ್ರಮಾಣ ಪತ್ರ ದಂಧೆಗೆ ಕಡಿವಾಣ ಹಾಕಲು ಸಾಧ್ಯ ಮತ್ತು ಆನ್‌ಲೈನ್ ಮೂಲಕ ವಿದ್ಯಾರ್ಹತೆಯ ಋಜುತ್ವವನ್ನು ಕರಾರುವಕ್ಕಾಗಿ ಪರಿಶೀಲಿಸಬಹುದು.

‘ಡಿ ಮ್ಯಾಟ್’ನಲ್ಲಿ ಅಂಕಿಅಂಶ ಕಲೆಹಾಕುವುದರಿಂದ ವಿದ್ಯಾರ್ಥಿಗಳಿಗೂ ಪ್ರಯೋಜನವಾಗಲಿದೆ. ಪ್ರಮಾಣ ಪತ್ರಗಳು ನಾಶವಾಗುವ ಆತಂಕ ಅಥವಾ ಪ್ರಮಾಣ ಪತ್ರಗಳ ಸಾಚಾತನವನ್ನು ಸಾಬೀತು ಪಡಿಸಲು ಅವುಗಳನ್ನು ಪದೇ ಪದೇ ದೃಢೀಕರಿಸುವ ಪ್ರಮೇಯ ಇರುವುದಿಲ್ಲ.

ಪ್ರಶಿಕ್ಷಣ ರಾಷ್ಟ್ರೀಯ ಮಂಡಳಿ (ಎನ್‌ಸಿಟಿಇ) (ತಿದ್ದುಪಡಿ) ಮಸೂದೆ ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) (ತಿದ್ದುಪಡಿ) ಮಸೂದೆಗಳ ಬಗ್ಗೆ ಸಂಸತ್‌ನ ಸ್ಥಾಯಿ ಸಮಿತಿ ನೀಡಿರುವ ಕೆಲವು ಸಲಹೆಗಳನ್ನು ಸೇರಿಸಿಕೊಳ್ಳಲು ಸಹ ಸಭೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.