ಶೈವ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ

7

ಶೈವ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ

Published:
Updated:
ಶೈವ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ

ಬೆಂಗಳೂರು:  `ಶೈವ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಇದಕ್ಕೆ ಶಿವನು ಗಂಗೆಗೆ ಶಿರದಲ್ಲಿ ಸ್ಥಾನ ನೀಡಿರುವುದೇ ಸಾಕ್ಷಿ~ ಎಂದು ಚಿಂತಕ ಎಂ.ಜಿ.ನಾಗರಾಜ್ ಅಭಿಪ್ರಾಯಪಟ್ಟರು.

ನಿಡುಮಾಮಿಡಿ ಮಹಾಸಂಸ್ಥಾನ ಮಠವು ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ `ಶಿವ ಸಂಸ್ಕೃತಿ~ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಜೀವನ ಪ್ರೀತಿಯನ್ನು ಹೆಚ್ಚಿಸುವ ವಿವಿಧ ಕಲಾ ಪ್ರಕಾರಗಳಾದ ನಾಟ್ಯ, ಸಂಗೀತ, ಶಿಲ್ಪಕಲೆಗಳಲ್ಲಿ ಶಿವನ ಸ್ವರೂಪ ಕಾಣಬಹುದಾಗಿದೆ. ಶಿವನು ಮೂಲತಃ ಕೃಷಿ ಪ್ರಧಾನವಾಗಿದ್ದ ಬುಡಕಟ್ಟು ಪಂಗಡದಿಂದ ಬಂದವನೆಂದು ಪುರಾಣಗಳು ಹೇಳುತ್ತವೆ~ ಎಂದರು.

`ಸಾಹಿತಿಗಳ ದೃಷ್ಟಿಕೋನದಲ್ಲಿ ಶಿವನು ವಿಭಿನ್ನವಾಗಿ ಕಂಡಿದ್ದಾನೆ. ಕುವೆಂಪು ಅವರ ಸಾಹಿತ್ಯದಲ್ಲಿ ಶಿವ ಜಲಗಾರನಾಗಿ ಕಂಡು ಬಂದರೆ, ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯದಲ್ಲಿ ಸುಖ-ದುಃಖಗಳ ಸಹವಾಸಿಯಾಗಿ ಪರಿಚಯವಾಗುತ್ತಾನೆ. ಅಪ್ರತಿಮ ಮತ್ತು ಅನಂತತೆ ಗುಣವನ್ನು ಪಡೆದುಕೊಂಡಿರುವುದು ಬಸವಣ್ಣನ ವಚನಗಳಲ್ಲಿ ವೇದ್ಯವಾಗುತ್ತದೆ~ ಎಂದು ಹೇಳಿದರು.

ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ, `ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಿಗೆ ಸಂಬಂಧಪಟ್ಟಂತೆ ವಿವಿಧ ಆಯಾಮಗಳಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಳ್ಳುವ ಅಗತ್ಯವಿದ್ದು, ಸತ್ಯಾನ್ವೇಷಣೆಗೆ ಮುಂದಾಗಬೇಕು~ ಎಂದರು.

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಡಾ.ಎಸ್.ಕೆ. ಅರುಣಿ, ಹಿರಿಯ ವಿದ್ವಾಂಸ ಡಾ. ಎಸ್.ವಿದ್ಯಾಶಂಕರ್, ಚಿಂತಕ ಪ್ರೊ.ಕೆ. ಜಿ.ನಾಗರಾಜಪ್ಪ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry