ಬುಧವಾರ, ಅಕ್ಟೋಬರ್ 16, 2019
22 °C

ಶೋಭಾ ದೆಹಲಿ ಭೇಟಿ ಉದ್ದೇಶ ಗೊತ್ತಿಲ್ಲ: ಸಿ.ಎಂ

Published:
Updated:

ಮಂಗಳೂರು: `ಸಚಿವೆ ಶೋಭಾ ಕರಂದ್ಲಾಜೆ ಅವರು ದೆಹಲಿಗೆ ಹೋಗಿರುವ ಉದ್ದೇಶ ನನಗೇನೂ ಗೊತ್ತಿಲ್ಲ. ಹೈಕಮಾಂಡ್‌ಗೆ ಅವರು ಸಹಜವಾಗಿ ರಾಜ್ಯದ ವಿದ್ಯಮಾನ ತಿಳಿಸಿರುತ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.ರಾಜ್ಯದಿಂದ ಹೋಗುವ ಪ್ರತಿಯೊಬ್ಬ ಸಚಿವರೂ ಪಕ್ಷದ ವರಿಷ್ಠರನ್ನು ಕಂಡು ಮಾತನಾಡುವುದು ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಸಚಿವರಾಗಿ ರಾಜ್ಯದ ವಿದ್ಯಮಾನಗಳನ್ನು ವರಿಷ್ಠರಿಗೆ ತಿಳಿಸುವ ಹೊಣೆಗಾರಿಕೆಯೂ ಅವರಿಗಿದೆ.ಸದ್ಯ ಪಕ್ಷದ ರಾಜ್ಯ ಘಟಕದಲ್ಲಿ ಕಾಣಿಸಿಕೊಂಡಿರುವ ಬಿಕ್ಕಟ್ಟಿನಿಂದಾಗಿ ಶೋಭಾ ಅವರ ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ ಅಷ್ಟೆ ಎಂದು ಅವರು ಬುಧವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರಿಗೆ ತಿಳಿಸಿದರು.`ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವಿನ ಗೊಂದಲ ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ಒಂದು ಹಂತದಲ್ಲಿ ಅದು ನಿವಾರಣೆಯಾಗುವ ವಿಶ್ವಾಸವೂ ಇದೆ. ಆದರೂ ಬಿಕ್ಕಟ್ಟು ಶಮನಕ್ಕೆ ಪಕ್ಷದ ಹಿರಿಯರು, ವರಿಷ್ಠರು ಮಧ್ಯಪ್ರವೇಶ ಮಾಡುವ ಅಗತ್ಯ ಇದೆ~ ಎಂದರು.ಮಾರ್ಚ್ ಮೊದಲ ವಾರ ವಿಧಾನಮಂಡಲ ಬಜೆಟ್ ಅಧಿವೇಶನ ನಡೆಯಲಿದೆ. ಇದೇ 30ರಿಂದ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಉಪಯುಕ್ತ ಚರ್ಚೆ ನಡೆಯಲಿವೆ.

ಮಂಗಳೂರಿನಲ್ಲಿ ಇದೇ 12ರಿಂದ 5 ದಿನಗಳ ಕಾಲ ನಡೆಯುವ ಯುವಜನೋತ್ಸವಕ್ಕೆ ಸಿದ್ಧತೆಗಳು ತೃಪ್ತಿಕರವಾಗಿ ನಡೆಯುತ್ತಿವೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

Post Comments (+)