ಶೋಲೆ ಕಪ್: ಎಸ್‌ಬಿಎಂಗೆ ಚಾಂಪಿಯನ್ ಪಟ್ಟ

7

ಶೋಲೆ ಕಪ್: ಎಸ್‌ಬಿಎಂಗೆ ಚಾಂಪಿಯನ್ ಪಟ್ಟ

Published:
Updated:
ಶೋಲೆ ಕಪ್: ಎಸ್‌ಬಿಎಂಗೆ ಚಾಂಪಿಯನ್ ಪಟ್ಟ

ರಾಮನಗರ: ಗೆಲುವಿನ ನಾಗಾಲೋಟ ಮುಂದುವರೆಸಿದ ಎಸ್‌ಬಿಎಂ ಪುರುಷರ ಕಬಡ್ಡಿ ತಂಡವು ಅಖಿಲ ಭಾರತ `ಎ~ ಗ್ರೇಡ್ ಆಹ್ವಾನಿತ ಕಬಡ್ಡಿ ಟೂರ್ನಿಯ ಚಾಂಪಿಯನ್ ಆಗಿ, ಶೋಲೆ ಕಪ್-2012 ಅನ್ನು ತನ್ನದಾಗಿಸಿಕೊಂಡಿತು.ರಾಮನಗರ- ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಯೋಜಕತ್ವದಲ್ಲಿ ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ನಡೆದ ನಾಲ್ಕು ದಿನಗಳ ಹೊನಲು ಬೆಳಕಿನ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಸೋಮವಾರ ರಾತ್ರಿ ನಡೆದ ಫೈನಲ್‌ನಲ್ಲಿ ಎಸ್‌ಬಿಎಂ ತಂಡವು 15-13 ಅಂಕಗಳಿಂದ ಕೆಪಿಟಿಸಿಎಲ್ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ಮಹಿಳೆಯ ವಿಭಾಗದಲ್ಲಿ ದೆಹಲಿಯ ಪಾಲಂ ಸ್ಪೋರ್ಟ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.ಬಹುಮಾನ ವಿತರಣೆ : ಪುರುಷರ ವಿಭಾಗದ ಎಸ್‌ಬಿಎಂ ತಂಡ ಹಾಗೂ ಮಹಿಳೆಯರ ವಿಭಾಗದ ದೆಹಲಿಯ ಪಾಲಂ ಸ್ಟೋರ್ಟ್ಸ್ ತಂಡಕ್ಕೆ ಪ್ರಥಮ ಬಹುಮಾನವಾಗಿ ತಲಾ 1 ಲಕ್ಷ ರೂ ನಗದು, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ ಮತ್ತು ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ವಿತರಿಸಿದರು.ದ್ವಿತೀಯ ಬಹುಮಾನ: ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಪುಣೆ ತಂಡಕ್ಕೆ 50 ಸಾವಿರ ರೂ ನಗದು, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ಪುರುಷರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದ ಕೆಪಿಟಿಸಿಎಲ್ ತಂಡಕ್ಕೆ 75 ಸಾವಿರ ರೂ ನಗದು, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು.ತೃತೀಯ ಬಹುಮಾನ; ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಆಳ್ವಾಸ್ ತಂಡ ಮತ್ತು ಪುಣೆಯ ಸುವರ್ಣಯುಗ ತಂಡಗಳಿಗೆ ತಲಾ ರೂ 25 ಸಾವಿರ ನಗದು, ಟ್ರೋಪಿ ಮತ್ತು ಪ್ರಮಾಣವನ್ನು, ಪುರುಷರ ವಿಭಾಗದಲ್ಲಿ ಬೆಂಗಳೂರಿನ ರೈಲ್ವೆ ಗಾಲಿ ಕಾರ್ಖಾನೆಯ ತಂಡ ಮತ್ತು ಎಚ್‌ಎಎಲ್ ತಂಡಗಳಿಗೆ ತಲಾ ರೂ 30 ಸಾವಿರ   ನಗದು, ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.ಮಹಿಳೆಯರ ವಿಭಾಗದಲ್ಲಿ ಉತ್ತಮ ರೈಡ ಪ್ರದರ್ಶಿಸಿದ ದೆಹಲಿಯ ಪಾಲಂ ತಂಡದ ಬಬ್ಲಿ ಅವರಿಗೆ ರೂ 5 ಸಾವಿರ ವಿಶೇಷ ಬಹುಮಾನ ದೊರೆಯಿತು. ಉತ್ತಮ ಹಿಡಿತಗಾರ್ತಿ ಪ್ರಶಸ್ತಿಗೆ ಆಳ್ವಾಸ್‌ನ ಸುಮಿತ್ರ ಭಾಜನರಾದರು. ಅವರು 5 ಸಾವಿರ ನಗದು ಪಡೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry