ಶೋಷಿತರು ಸಮನ್ವಯತೆ ಸಾಧಿಸಿ ಹೋರಾಡಲಿ

7
ಮಾಯಕೊಂಡ: ಕನಕ ಜಯಂತ್ಯುತ್ಸವ ಮತ್ತು ಐಕ್ಯತಾ ಸಮಾವೇಶದಲ್ಲಿ ಬಿ.ಕೆ. ರವಿ ಕರೆ

ಶೋಷಿತರು ಸಮನ್ವಯತೆ ಸಾಧಿಸಿ ಹೋರಾಡಲಿ

Published:
Updated:

ಮಾಯಕೊಂಡ: ಶೋಷಿತ ವರ್ಗಗಳು ಸಂಘಟಿತರಾಗಿ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಕೆ. ರವಿ ಕರೆ ನೀಡಿದರು. ಇಲ್ಲಿ ಭಾನುವಾರ ನಡೆದ ಕನಕ ಜಯಂತುತ್ಸವ ಮತ್ತು ಐಕ್ಯತಾ ಸಮಾವೇಶದಲ್ಲಿ ಅವರು ಮಾತನಾಡಿದರು.ಕನಕ ದಾಸರು ನಾಡಿಗೆ ಶ್ರೇಷ್ಟ ಕೀರ್ತನೆಗಳನ್ನು ನೀಡಿ, ಶೋಷಿತರ ಪರವಾಗಿ ಬಹು ಹಿಂದೆಯೇ ದನಿ ಎತ್ತಿದವರು. ಯಾವ ಕ್ಷೇತ್ರದಲ್ಲೂ ಹಿಂದುಳಿದ ವರ್ಗಗಗಳಿಗೆ ಸರಿಯಾದ ಪಾಲು  ಸಿಗುತ್ತಿಲ್ಲ. ಎಲ್ಲರೂ ಒಗ್ಗಟ್ಟಾಗಿ ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಪಡೆಯಲು ಹೋರಾಡಬೇಕಿದೆ. ಅಧಿಕಾರ ಸಿಕ್ಕರೆ ಶೋಷಿತರ ಪರವಾಗಿ ಕೆಲಸ ಮಾಡಬೇಕು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಶೋಷಿತರ ಪರವಾಗಿ ಸಾಕಷ್ಟು ಕೆಲಸ ಮಾಡಿದರು ಎಂದು ಸ್ಮರಿಸಿದರು.ಇಸ್ಲಾಂ ಧರ್ಮ ಗುರು  ಇಬ್ರಾಹಿಂ ಸಕಾಫಿ  ಮಾತನಾಡಿ, ಇಸ್ಲಾಂ ಧರ್ಮ ಹಿಂಸೆ, ರಕ್ತಪಾತಗಳನ್ನು  ಕಡುವಾಗಿ ವಿರೋಧಿಸುತ್ತದೆ. ಇದರ ಕುರಿತು ಸಂದೇಹಬೇಡ. ಹಿಂದುಳಿದ ವರ್ಗಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಹಕ್ಕುಗಳಿಗಾಗಿ ಹೋರಾಟಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದರು.ಬಸವ ಪ್ರಭು ಯಾದವಾನಂದ ಸ್ವಾಮೀಜಿ ಮಾತನಾಡಿ, ಕನಕ ಮತ್ತು ಕೃಷ್ಣ ಇಬ್ಬರೂ ಶೂದ್ರರಾದ ಕಾರಣ ಕುರುಬ ಮತ್ತು ಯಾದವ ಜಾತಿಗಳ ಆಚರಣೆಗಳಿಗೆ ಹೋಲಿಕೆ ಇದೆ. ಹಿಂದುಳಿದ ವರ್ಗಗಳ ವೇದಿಕೆ ನಿರ್ಮಾಣಕ್ಕೆ ಕೆಲವರು ಅಸೂಯೆಪಟ್ಟರು. ದೇವರಾಜ ಅರಸು ಹಿಂದುಳಿದವರ ದನಿಯಾಗಿದ್ದರು ಎಂದರು.ಅಂಬಿಗರ ಚೌಡಯ್ಯ ಗುರುಪೀಠದ ಶಾಂತಮುನಿ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ನಿಜವಾದ ಗೆಲುವು ಪಡೆಯಲು ತನ್ನನ್ನು ಮೊದಲು ಜಯಿಸಬೇಕು. ಹಿಂದುಳಿದ ವರ್ಗಗಳು ಎಲ್ಲಾ ವರ್ಗಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದರು.

ಕನಕ ನೌಕರ ಬಳಗದ ಗೌರವಾಧ್ಯಕ್ಷ ಜಿ. ಮಲ್ಲಿಕಾರ್ಜುನಪ್ಪ ಪ್ರಾಸ್ತಾವಿಕ ಮಾತನಾಡಿ, ಕನಕರ ಚಿಂತನೆ ಮತ್ತು ಸಮಕಾಲೀನ ವಿದ್ಯಮಾನ  ಚರ್ಚಿಸಿದರು.  ಹಾಲುಮತ ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣನವರ  ಭಾವಚಿತ್ರವನ್ನು ಕಲಾತಂಡಗಳು ಮತ್ತು ಕುಂಭಮೇಳದೊಂದಿಗೆ  ಮೆರವಣಿಗೆ ಮಾಡಲಾಯಿತು.ಕನಕ ನೌಕರ ಬಳಗದ ಅಧ್ಯಕ್ಷ ಬೀರಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹದೇವ ಗವಾಯಿ ಸಂಗಡಿಗರು ಪ್ರಾರ್ಥಿಸಿದರು. ಉಮಾಪತಿ ಸ್ವಾಗತಿಸಿರು. ರಾಮಮೂರ್ತಿ ಕಾರ್ಯಕ್ರಮ ನಿರೂಪಿಸಿದರು.ಸರ್ದಾರ್ ಸೇವಾಲಾಲ್  ಸ್ವಾಮಿಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಕಾಗಿನೆಲೆ ನಿರಂಜನಾನಂದ ಪುರಿ  ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶರದಾ ಉಮೇಶ ನಾಯ್ಕ, ತಾಲ್ಲೂಕು ಪಂಚಾಯ್ತಿ  ಸದಸ್ಯ ಸುರೇಂದ್ರಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜಪ್ಪ, ಸೇವಾ ಸಹಕಾರ  ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಗ್ರಾಮದ ಮುಖಂಡರಾದ ಮಾಜಿ ಪುರಸಬಾ ಸದಸ್ಯ ನೀಲಪ್ಪ, ಗಂಗಾಮತ ಸಮಾಜದ ಮುಖಂಡ ರಂಗಪ್ಪ,  ಹನುಮಂತಪ್ಪ, ವೆಂಕಟೇಶ್, ರುದ್ರಪ್ಪ, ಸಿದ್ದಪ್ಪ,  ಕಾಂಗ್ರಸ್ ಮುಖಂಡ ಬಿ.ಎಚ್. ವೀರಭದ್ರಪ್ಪ, ದಿಂಡದಹಳ್ಳಿ ರಂಗಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry