ಗುರುವಾರ , ಮೇ 13, 2021
40 °C

ಶೋಷಿತರ ಕೈಗೆ ಅಧಿಕಾರ ಕೊಡಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಶೋಷಿತರು ಒಗ್ಗೂಡಿ ತಮ್ಮ ಪಾಲು ಪಡೆದುಕೊಳ್ಳದಿದ್ದರೆ ಸಾಮಾಜಿಕ ನ್ಯಾಯ ಗಗನಕುಸುಮವಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.ಬುದ್ಧ, ಬಸವ, ಅಂಬೇಡ್ಕರ್, ಜಗಜೀವನರಾಮ್ ಸಮನ್ವಯ ಸಮಿತಿ ಆಶ್ರಯದಲ್ಲಿ ಭಾನುವಾರ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಜಗಜೀವನರಾಮ್ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ `ಶೋಷಿತರ ಸಮಾವೇಶ~ ಉದ್ಘಾಟಿಸಿ ಅವರು ಮಾತನಾಡಿದರು.ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರುವವರ ಕೈಯಲ್ಲಿ ಅಧಿಕಾರವಿದ್ದರೆ ಮಾತ್ರ ಬದಲಾವಣೆ ಸಾಧ್ಯ. ಅಧಿಕಾರ ಇಲ್ಲದೆ ಬದಲಾವಣೆ ಕಷ್ಟ. ಡಾ. ಬಿ.ಆರ್. ಅಂಬೇಡ್ಕರ್ ಅವರು ಬಯಸಿದ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಇನ್ನೂ ದೊರೆತಿಲ್ಲ. ಶೋಷಿತರಲ್ಲಿ ಗುಲಾಮಗಿರಿ ಮನಸ್ಥಿತಿ ತೊಲಗಿ ಸ್ವಾಭಿಮಾನ ಮೂಡಬೇಕು ಎಂದು ಕರೆ ನೀಡಿದರು.ಬಹುಸಂಖ್ಯಾತರಾಗಿದ್ದರೂ ಶೋಷಿತರಿಗೆ ದೊರೆಯಬೇಕಾದ ಹಕ್ಕುಗಳು ದೊರೆತಿಲ್ಲ. ಜಾತಿ ವ್ಯವಸ್ಥೆಯಿಂದಲೇ ಇಷ್ಟೊಂದು ಅಸಮಾನತೆ ಇದೆ ಎಂದು ಸುಪ್ರೀಂಕೊರ್ಟ್ ಸಹ ಹೇಳಿದೆ.ಮಹಾರಾಷ್ಟ್ರದಲ್ಲಿ ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಸಾಮಾಜಿಕ ನ್ಯಾಯದ ಪರ ಚಿಂತನೆ ಮಾಡಿ ತೀರ್ಮಾನ ಕೈಗೊಂಡರು.

ಆದರೆ, ಸ್ವಾತಂತ್ರ್ಯ ದೊರೆತ ನಂತರ ಮೇಲ್ಜಾತಿ-ಕೆಳಜಾತಿ, ಬಡವರು-ಶ್ರೀಮಂತರ ನಡುವೆ ಕಂದಕ ಇನ್ನೂ ನಿವಾರಣೆಯಾಗಿಲ್ಲ. ಎಂದು ವಿಷಾದ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.