ಶುಕ್ರವಾರ, ಮೇ 14, 2021
32 °C

ಶೌಚಾಲಯವಿಲ್ಲದ ಸರ್ಕಾರಿ ಪ್ರೌಢಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ: ಕಮಲಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಾಲ್ಕು ವರ್ಷಗಳಿಂದ ಶೌಚಾಲಯದ ಒಳಗಿನ ಪ್ರತ್ಯೇಕಿಸುವ ಗೋಡೆಗಳು ಕೆಳಗೆ ಬಿದ್ದಿದೆ.ಶಾಲೆಯಲ್ಲಿ ಸುಮಾರು 600 ವಿದ್ಯಾರ್ಥಿಗಳು, 27 ಶಿಕ್ಷಕರು, ಇವರಲ್ಲಿ 16  ಶಿಕ್ಷಕಿಯರು ಇದ್ದಾರೆ. ಬಹಿರ್ದೆಸೆಗೆ ಹೋಗಬೇಕಾದರೆ ಇವರು ಅರ್ಧ ಕಿಲೋಮೀಟರ್ ದೂರದ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗಬೇಕು. ಶಾಲೆಯಲ್ಲಿ ಸುಮಾರು 20 ಕೋಣೆಗಳು, ನಾಲ್ಕು ಶೌಚಾಲಯಗಳಿದ್ದರೂ ಒಂದೂ ಸರಿಯಾಗಿಲ್ಲ.ನಾವು ದಿನ ಶೌಚಾಲಯಕ್ಕಾಗಿ ಪರದಾಡುತ್ತಿದ್ದರೂ ಸಂಬಂಧಿಸಿದವರು ಗಮನ ಹರಿಸುತ್ತಿಲ್ಲ ಎಂದು ಶಾಲೆಯ ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದರು. ಆರ್‌ಎಂಎಸ್‌ಎ ಯೋಜನೆ ಅಡಿಯಲ್ಲಿ ಶಾಲೆಗೆ ಸರ್ಕಾರದಿಂದ ಪ್ರತಿ ತಿಂಗಳಿಗೆ 5 ಸಾವಿರ ರೂಪಾಯಿ ಬಂದರು ಇಲ್ಲಿ ಗುಣಮಟ್ಟದ ಸುಧಾರಿಸಿಲ್ಲ.ಶೌಚಾಲಯಕ್ಕೆ ಬಂದಿರುವ ಹಣವು ಸಂಪೂರ್ಣವಾಗಿ ಗುಳುಂ ಆಗಿದೆ ಎಂದು ಶಾಲೆಯ ಮೂಲಗಳಿಂದ ತಿಳಿದು ಬಂದಿದೆ. ಶಾಲೆಯಲ್ಲಿ ವಿದ್ಯಾರ್ಥಿನಿಯರ  ಶೌಚಾಲಯದ ಸಮಸ್ಯೆ ಕೂಡಲೇ ಸುಧಾರಣೆಯಾಗಬೇಕು ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.