ಮಂಗಳವಾರ, ಏಪ್ರಿಲ್ 13, 2021
31 °C

ಶೌಚಾಲಯ ನಿರ್ಮಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ ಹೊತಪೇಟ ಗ್ರಾಮದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯವಿಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅವಶ್ಯಕ ಸೌಲಭ್ಯಗಳನ್ನು ಒದಗಿಸುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ. ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿಯವರಿಗೆ ಮಹಿಳೆಯರು ಮನವಿ ಸಲ್ಲಿಸಿದ್ದಾರೆ.ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. 5000ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಹೆಚ್ಚಾಗಿ ಬಡ ಕೂಲಿಕಾರ್ಮಿಕರು ವಾಸವಾಗಿದ್ದು ಕೃಷಿಯ ಮೇಲೆ ಬದುಕು ಅವಲಂಬಿತವಾಗಿದೆ.

 

ಗ್ರಾಮದಲ್ಲಿ ಯಾವುದೇ ಬಡಾವಣೆಯಲ್ಲಿ ಮಹಿಳೆರಿಗೆ ಶೌಚಾಲಯವಿಲ್ಲ. ಗ್ರಾಮ ಪ್ರವೇಶ ಮಾಡುವ ರಸ್ತೆಯ ಮೇಲೆ ರಾತ್ರಿ  ನೈಸರ್ಗಿಕ ಕರೆಗಳನ್ನು ಪೂರೈಯಿಸಿಕೊಳ್ಳಬೇಕು. ವಾಹನ ಸಂಚರಿಸುತ್ತಿದ್ದರೆ ರಸ್ತೆ ಮೇಲೆ ಮಖ ಮುಚ್ಚಿಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ನಿಲ್ಲಬೇಕೆಂದು ಮಹಿಳೆಯರು ತಿಳಿಸಿದ್ದಾರೆ.ರಾತ್ರಿ ಸಮಯದ ಕತ್ತಲೆಯಲ್ಲಿ ವಿಷ ಜಂತುಗಳ ಭೀತಿಯಿಂದ ಅನಿವಾರ್ಯವಾಗಿ ರಸ್ತೆ ಮೇಲೆ ಬಹಿರ್ದೆಶಿಗೆ  ಹೋಗುವ ದುಸ್ಥಿತಿ ಬಂದಿದೆ ಎಂದು ಮಹಿಳೆಯರು ದೂರಿದರು.ಅಲ್ಲದೆ ಕುಡಿಯುವ ನೀರಿನ ಸಮಸ್ಯೆಯು ತುಂಬಾ ಇದೆ. ಸಾಕಷ್ಟು ನೀರಿನ ಸೌಲಭ್ಯವಿದ್ದರು ಸಹ ನಿರ್ವಹಣೆಯ ಬರವಿದೆ. ನಲ್ಲಿಯ ಮೂಲಕ ಸಮರ್ಪಕವಾಗಿ ನೀರು ಪೂರೈಕೆಯಾಗುವದಿಲ್ಲ. ಕೂಲಿ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ ಅದರ ಬಗ್ಗೆಯೂ ಗಮನಹರಿಸಿ ನ್ಯಾಯ ದೊರಕಿಸಿಕೊಡಿ ಎಂದು ಅಸಹಾಯಕ ಮಹಿಳೆಯರು ಕೊನೆಗೆ ನ್ಯಾಯ ಕೋರಿ ಕೊರ್ಟ್‌ನ ಕದ ತಟ್ಟಿದ್ದಾರೆ.ಸಮಸ್ಯೆ ಆಲಿಸಿದ ನ್ಯಾಯಾಧೀಶರು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸು ನೀಡಿ ನ್ಯಾಯಯುವಾದ ಬೇಡಿಕೆಯನ್ನು ಪ್ರಾಧಿಕಾರದ ಮೂಲಕ ಬಗೆ ಹರಿಸಲಾಗುವುದೆಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.