ಬುಧವಾರ, ಮೇ 18, 2022
23 °C

ಶೌಚಾಲಯ ಸ್ಥಳಾಂತರ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಅವಶ್ಯವಿರುವ ವಾರ್ಡ್‌ಗಳಿಗೆ ಮುಖ್ಯಮಂತ್ರಿ ಅನುದಾನದಲ್ಲಿ ಮಂಜೂರಾದ ಐಟೆಕ್ ಮಹಿಳಾ ಶೌಚಾಲಯಗಳನ್ನು ಬೇರೆಡೆ ಸ್ಥಳಾಂತರಿಸಿರುವ ಕುರಿತು ಕೆಲ ನಗರಸಭೆ ಸದಸ್ಯರು ಎಸ್.ಜೆ.ಎಸ್.ಆರ್.ವೈ ಸಭಾ ಭವನದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಸದಸ್ಯ ಮಲ್ಲಿಕಾರ್ಜುನ ಪಾಟೀಲ್ ನಗರಸಭೆಯ ಹೈಟೆಕ್ ಮಹಿಳಾ ಶೌಚಾಲಯಗಳ ನಿರ್ಮಾಣಕ್ಕೆ ಮಹಿಬೂಬಿಯಾ ಕಾಲೊನಿ, ಗಂಗಾನಗರ, ಜನತಾ ಕಾಲೊನಿಯ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.|

 

ಅಲ್ಲದೇ ಕಾಮಗಾರಿಗೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಈ ವಾರ್ಡುಗಳಿಗೆ ಮಂಜೂರಾದ ಶೌಚಾಲಯಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದಾಗ ಸದಸ್ಯೆ ಕೃಷ್ಣಕುಮಾರಿ ಉಮಲೂಟಿ ಆಕ್ಷೇಪ ವ್ಯಕ್ತಪಡಿಸಿದರು. ಸಿ.ಎಂ. ಅನುದಾನದಲ್ಲಿ ಐಟೆಕ್ ಶೌಚಾಲಯ ನಿರ್ಮಾಣಕ್ಕೆ 15ಲಕ್ಷ ಹಣ ಬಿಡುಗಡೆಯಾಗಿದೆ. ಮಹೆಬೂಬಿಯಾ ಕಾಲೊನಿಯಲ್ಲಿ ಶೌಚಾಲಯ ಸಮಸ್ಯೆಯಿದ್ದು ಇಲ್ಲಿಗೆ ಮಂಜೂರಾದ ಶೌಚಾಲಯವನ್ನು ವಾರ್ಡ್ ನಂ.5ಕ್ಕೆ ಸ್ಥಳಾಂತರಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ವಾರ್ಡ್ ವಾರ್ಡ್ ನಂ.19ರಿಂದ 23ರಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಇದುವರೆಗೂ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡುವ ಕೆಲಸ ನಡೆದಿಲ್ಲ. ಕೋರ್ಟ್ ಹತ್ತಿರ ಇರುವ ಶೌಚಾಲಯ ನಿರ್ಮಾಣಕ್ಕೆ ಸುಮಾರು ಹತ್ತು ವರ್ಷಗಳು ಕಳೆದಿವೆ. ಈಗ ಸಿ.ಎಂ.ಅನುದಾನದಲ್ಲಿ ಕಳೆದ ವರ್ಷವೇ ಬಂದಿರುವ ಹಣವನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸದುಪಯೋಗಕ್ಕೆ ಮುಂದಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಡಿ.ನದೀಮ್‌ಮುಲ್ಲಾ ಕಾಮಗಾರಿಗೆ ತಗಾದೆ ತೆಗೆದಿರುವ ಸ್ಥಳೀಯರ ಮನವೊಲಿಸಿ ನಿಗದಿಪಡಿಸಿದ ಸ್ಥಳದಲ್ಲಿಯೇ ಶೌಚಾಲಯ ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ನೀಡಿದರು. ಅವಶ್ಯಕತೆ ಇರುವ ನಗರದ ವಾರ್ಡುಗಳಲ್ಲಿ ಶೀಘ್ರವೇ ಶೌಚಾಲಯ ಕಾಮಗಾರಿ ಪ್ರಾರಂಭಿಸುವ ಕುರಿತು ಸಭೆಯುಲ್ಲಿ ಸರ್ವಾನುಮತದಿಂದ ತೀರ್ಮಾನಿಸಿತು.ಹೈದ್ರಾಬಾದ್‌ನ ವಾಟರ್‌ಹೆಲ್ತ್ ಇಂಡಿಯಾ ಕಂಪನಿಯ 20 ಲೀಟರ್‌ಗೆ 5ರೂನಂತೆ ಸಮುದಾಯ ಕುಡಿಯುವ ನೀರಿನ ಯೋಜನೆ ಜಾರಿಗೆ ತರುವ ಬಗ್ಗೆ ನದೀಮ್‌ಮುಲ್ಲಾ ಸಭೆಯ ಗಮನಕ್ಕೆ ತಂದಾಗ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಕೆ.ಜಿಲಾನಿಪಾಶಾ ಈ ಹಿಂದೆ ಇಂತದೇ ಕಂಪೆನಿಯು ಇದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಕುಡಿಯುವ ನೀರೊದಗಿಸುವ ಕುರಿತು ಚರ್ಚಿಸಲಾಗಿತ್ತು. ಆದರೆ ಅದು ಪ್ರಗತಿ ಕಂಡಿಲ್ಲ. ಎಂ.ಎನ್.ಸಿ ಕಂಪನಿಗೆ ನೀರಿನ ಜವಾಬ್ದಾರಿ ನೀಡುವುದು ಸೂಕ್ತವಲ್ಲ ಎಂದರು.ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಸ್ಥಾಯಿ ಸಮಿತಿ ಅಧ್ಯಕ್ಷ ಸರಸ್ವತಿ ಪಾಟೀಲ್ ಗದ್ರಟಗಿ, ಪೌರಾಯುಕ್ತ ಕೊಪ್ರೇಶಾಚಾರ್, ಮಾಜಿ ಅಧ್ಯಕ್ಷ ಕೆ.ಶರಣಪ್ಪ ಟೆಂಗಿನಕಾಯಿ, ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಎಸ್.ಶರಣೇಗೌಡ, ಪ್ರಭುರಾಜು, ಚಂದ್ರಶೇಖರ ಮೈಲಾರ, ಶೈಲಜಾ ಷಡಕ್ಷರಪ್ಪ, ಯಂಕಪ್ಪ ಇನ್ನಿತರ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.