ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಆಚರಣೆ

7

ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಆಚರಣೆ

Published:
Updated:

ಮರಿಯಮ್ಮನಹಳ್ಳಿ: ಪಟ್ಟಣದ ಮುಸ್ಲಿಂ ಭಾಂಧವರು ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಭಾನುವಾರ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಈದ್ ಮಿಲಾದ್ ಹಬ್ಬದ ಅಂಗವಾಗಿ ಸಮುದಾಯದವರು ಮುಖ್ಯ ಬೀದಿಗಳಲ್ಲಿ ಮಕ್ಕಾ ಮದೀನದ ಪ್ರತಿಕೃತಿಯ ಮೆರವಣಿಗೆ ನಡೆಸಿದರು. ಮಸೀದಿಯಿಂದ ಆರಂಭ ವಾದ ಮೆರವಣಿಗೆ ಮುಖ್ಯಬೀದಿಗಳ ಮೂಲಕ ನಾರಾಯಣದೇವರಕೆರೆ ವೃತ್ತದ ಮೂಲಕ ಮಸೀದಿಗೆ ತೆರಳಿತು.ಮೆರವಣಿಗೆಯಲ್ಲಿ ಸಮಾಜದ ಹಿರಿಯರು, ಮಕ್ಕಳು, ಯುವಕರು ಹೊಸ ದಿರಿಸು ಧರಿಸಿ ಭಾಗವಹಿಸಿದ್ದರು. ನಂತರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಜರುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry