ಶ್ರದ್ಧೆ ಇದ್ದಲ್ಲಿ ಜ್ಞಾನ, ಮೋಕ್ಷ

7

ಶ್ರದ್ಧೆ ಇದ್ದಲ್ಲಿ ಜ್ಞಾನ, ಮೋಕ್ಷ

Published:
Updated:

ಚಿಕ್ಕಮಗಳೂರು: ಜೀವನವೇ ಒಂದು ಪ್ರಯೋಗಶಾಲೆ.  ದೇವರ ಅನುಗ್ರಹ ಎಲ್ಲಕ್ಕೂ ಮುಖ್ಯ.  ಕಷ್ಟ-ಸುಖ, ನೋವು-ನಲಿವು ಇಲ್ಲವೂ ಅವನು ಕೊಟ್ಟ ವರ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನುಡಿದರು.

ವಸ್ತಾರೆ ಹೋಬಳಿ ಕೋಟೆವೂರು ಹುಣಸೆ ಮಕ್ಕಿಗ್ರಾಮದ   ರಾಮೇಶ್ವರ ದೇವರ ಜೀರ್ಣೋ ದ್ಧಾರ ಗೊಂಡ ದೇವಾಲಯ ವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.ಶಿವ ಮತ್ತು ವಿಷ್ಣು ಎರಡೂ ಒಂದೇ.  ಯಾರನ್ನೆ ಪೂಜೆ ಮಾಡಿದರೂ ಸಹ ತಲ್ಲೀನತೆ ಅಗತ್ಯ. ಒಳಗೆ ಪ್ರೇರಣೆಗೂ ಹೃದಯವಂತಿಕೆ ಅಗತ್ಯ ಎಂದರು.ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರಿಗುಣನಾಥ ಸ್ವಾಮೀಜಿ ಮಾತನಾಡಿ,  ಶಿವನ ಮುಂದೆ ಕುಳಿತ ನಂದಿ ಪೂಜೆಗೆ ಒಳಗಾಗುವಂತೆ ದೇವರಮುಂದೆ ಮುಖಮಾಡಿದರೆ ನಾವೂ ಗೌರವಾದರಕ್ಕೆ ಪಾತ್ರರಾಗಬಹುದು.  ಶ್ರದ್ಧೆ ಇದ್ದಲ್ಲಿ ಜ್ಞಾನ, ಮೋಕ್ಷ ಎಲ್ಲವೂ ಸಿಗುತ್ತದೆ. ಅಂತರಾಳದಲ್ಲಿರುವ ಭಗವಂತನ ಅರಿಯುವ ಪ್ರಯತ್ನ ನಮ್ಮದಾಗಬೇಕು.  ಗುಡಿಯಲ್ಲಿರುವ ಭಗವಂತನೆ ಹೃದಯಲ್ಲಿಯೂ ಇರುತ್ತಾನೆ ಎಂಬುದು ನಮ್ಮದಾಗಬೇಕೆಂದರು.  ಹೊರನಾಡು  ಕ್ಷೇತ್ರದ  ಶ್ರಿಭೀಮೇಶ್ವರ ಜೋಷಿ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರದರ್ಶನ ಬದುಕಿಗಿಂತ ನಿದರ್ಶನದ ಬದುಕು ನಮ್ಮದಾಗಬೇಕು. ಇಂದ್ರಿಯ ನಿಗ್ರಹಕ್ಕೆ ದೈವಾನು ಗ್ರಹ ಅಗತ್ಯ.  ಹಣ ಜೀವನದ ಒಂದುಭಾಗ ಮಾತ್ರ.  ಸರ್ವಸ್ವ ಅಲ್ಲ ಎಂಬ ಅರಿವು ನಮಗಿರಬೇಕು.  ಸಂತೃಪ್ತಿ ಎನ್ನುವುದು ಮಾನಸಿಕ ವ್ಯವಸ್ಥೆ ಎಂದ ಅವರು,  ಸಂತೃಪ್ತಿ ಇರುವವನೆ ಸುಖಿ. ಇಲ್ಲದವನು ದರಿದ್ರನಾ ಗುತ್ತಾನೆ.  ದೈವಾನುಗ್ರಹದ ಪರಿಪೂರ್ಣ ಆಶೀರ್ವಾದ ಸಾರ್ಥಕಬದುಕಿಗೆ ಅಗತ್ಯ ಎಂದರು.ಹಿರಿಯ ಗ್ರಾಮಸ್ಥ ರಾಜಣ್ಣಗೌಡ ಮಾತನಾ ಡಿದರು.   ಎಚ್.ಪಿ.ಶೈಲೇಶಗೌಡ, ಅರ್ಚನಾ, ಸತೀಶಗೌಡ, ಹೇಮಾ, ಲಿಂಗಪ್ಪಗೌಡ ಮತ್ತು ಅನ್ನಪೂರ್ಣ ಅವರನ್ನು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತ ನಾಡಿ, ದೇವಸ್ಥಾನದ ಪ್ರಾಚೀನತೆ ಸುತ್ತಲಿನ  ಶಿಲಾಶಾಸನಗಳ ಬಗ್ಗೆ ಮಾಹಿತಿ ನೀಡಿದರು. ಎಚ್.ಎಸ್.ಹೇಶ್, ಹರೀಶ್,ಎಐಟಿ ಪ್ರಾಂಶು ಪಾಲ ಡಾ.ಸಿ.ಕೆ.ಸುಬ್ರಾಯ, ಕಲಾಸೇವಾಸಂಘದ ಅಧ್ಯಕ್ಷ ಕೆ.ಮೋಹನ್, ಇಂಜಿನಿಯರ್ ಎಂ.ಎ. ನಾಗೇಂದ್ರ, ಜೆಡಿಎಸ್ ಮುಖಂಡರಾದ ಎಚ್.ಎಚ್.ದೇವರಾಜ್, ಎಸ್.ಎಲ್.ಭೋಜೇಗೌಡ, ಎಂ.ಎಸ್.ಬಾಲ ಕೃಷ್ಣೇಗೌಡ, ಚಂದ್ರಪ್ಪ ಇದ್ದರು.  ಶ್ರಿರಾಮೇಶ್ವರ ದೇವರ ಜೀರ್ಣೋದ್ಧಾರ ,  ಪುನರ್ ಅಷ್ಟಬಂಧ ಪ್ರತಿಷ್ಠಾಪನಾ ಬ್ರಹ್ಮಕುಂಭಾ ಭಿಷೇಕ ಮಹೋತ್ಸವದ  ಅಂಗವಾಗಿ ಶುಕ್ರವಾರ ಬೆಳಿಗ್ಗೆಯಿಂದ ವಿಶೇಷಪೂಜೆ, ಹೋಮ- ಯಾಗದಿಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry