ಗುರುವಾರ , ಜುಲೈ 16, 2020
22 °C

ಶ್ರಬ್ಸ್- ನೆದರ್‌ಲೆಂಡ್ ಬಿ.ವಿ ಸಂಸ್ಥೆ ಒಪ್ಪಂದ: ಗುಲಾಬಿ ತಳಿಗಳ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರಬ್ಸ್- ನೆದರ್‌ಲೆಂಡ್ ಬಿ.ವಿ ಸಂಸ್ಥೆ ಒಪ್ಪಂದ: ಗುಲಾಬಿ ತಳಿಗಳ ಪ್ರಯೋಗ

ನೆಲಮಂಗಲ: ಗುಲಾಬಿ ಪುಷ್ಪೋದ್ಯಮದಲ್ಲಿ ಉತ್ತಮ ಫಸಲು ಪಡೆಯುತ್ತಿರುವ ಮತ್ತು ವಿವಿಧ ಗುಲಾಬಿ ತಳಿಗಳ ಪ್ರಯೋಗದಲ್ಲಿ ನಿರತವಾಗಿರುವ ಸ್ಥಳೀಯ ಶ್ರಬ್ಸ್ ಎನ್ ರೋಸಸ್ ಸಂಸ್ಥೆಯೊಂದಿಗೆ ನೆದರ್‌ಲೆಂಡ್‌ನ ಮಯಿರ್‌ಹೀಮ್ ರೋಸಸ್ ಅಂಡ್ ಟ್ರೇಡಿಂಗ್ ಬಿ.ವಿ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.ಸಮೀಪದ ಕಣೇಗೌಡನಹಳ್ಳಿಯ ಪುಷ್ಪೋದ್ಯಮಿ ಭಾಸ್ಕರ್ ರೆಡ್ಡಿ ಅವರ ಈ ಸಸ್ಯ ಕ್ಷೇತ್ರಕ್ಕೆ ನೆದರ್‌ಲೆಂಡ್‌ನ ಭಾರತೀಯ ರಾಯಭಾರಿ ಬಾಬ್ ಹೀನ್ಸ್ ಮತ್ತು ಅಧಿಕಾರಿಗಳು ಭೇಟಿ ನೀಡಿ, ಪುಷ್ಪ ಕೃಷಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.`ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಪುಷ್ಪೋದ್ಯಮಿಗಳು ಮತ್ತು ಸಸ್ಯೋದ್ಯಮಿಗಳು ಇದ್ದು, ಇಲ್ಲಿನ ಉದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದಲು ಎನ್ ರೋಸಸ್ ಮತ್ತು ಇಂಡೋ ಡಚ್ ನೆಟ್‌ವರ್ಕಿಂಗ್ ಮಿಷನ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ~ ಎಂದು ಬಾಬ್ ಹೀನ್ಸ್ ತಿಳಿಸಿದರು.`ಸರ್ಕಾರ ಸೂಕ್ತ ಕಾಯ್ದೆ ಜಾರಿಗೆ ತಂದು ಗುಲಾಬಿ ತಳಿಗಳ ನಕಲನ್ನು ತಡೆಗಟ್ಟಬೇಕು ಮತ್ತು ಪುಷ್ಪೋದ್ಯಮವನ್ನು ಪ್ರೋತ್ಸಾಹಿಸಬೇಕು~ ಎಂದು ಭಾಸ್ಕರ್ ರೆಡ್ಡಿ ಕೇಳಿಕೊಂಡರು.ದೊಡ್ಡಬಳ್ಳಾಪುರದ ಪುಷ್ಪೋದ್ಯಮಿ ಜಿ.ಪಿ.ರಾವ್, ನೆದರ್‌ಲೆಂಡ್‌ನ ಎಂ.ಆರ್. ಅಂಡ್ ಟಿಬಿವಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಥಿಯೋರೂಜಿಸ್ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.