ಶ್ರಮದಾನ ಮಾಡಿ ಪ್ರತಿಭಟನೆ!

7

ಶ್ರಮದಾನ ಮಾಡಿ ಪ್ರತಿಭಟನೆ!

Published:
Updated:

ಸುಳ್ಯ: ಹೆದ್ದಾರಿ ಹೊಂಡಗಳನ್ನು ಶ್ರಮದಾನದ ಮೂಲಕ ಮಣ್ಣು ತುಂಬಿಸಿ ಮುಚ್ಚುವ ಮೂಲಕ ಕಾಂಗ್ರೆಸ್ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.ಬುಧವಾರ ಬೆಳಿಗ್ಗೆ ಪೈಚಾರ್ ಬಳಿ ಪಕ್ಷದ ಸುಮಾರು 50 ಮಂದಿ ಕಾರ್ಯಕರ್ತರು ಜೆಸಿಬಿ, ಟ್ರಾಕ್ಟರ್ ಯಂತ್ರಗಳ ಮೂಲಕ ಹಾಗೂ ಹಾರೆ, ಬುಟ್ಟಿ ಬಳಸಿ ಪೈಚಾರಿನಿಂದ ಜಾಲ್ಸೂರು ಕಡೆಗೆ ಅಡ್ಕಾರ್‌ವರಗೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿದ್ದ ಹೊಂಡಗಳನ್ನು ಮುಚ್ಚಿದರು. ದೊಡ್ಡ ದೊಡ್ಡ ಹೊಂಡಗಳಿಗೆ ಕಲ್ಲು ಮತ್ತು ಮಣ್ಣು ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.ಇದಕ್ಕೂ ಮೊದಲು ನಡೆದ  ಸಭೆಯನ್ನು  ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎಂ.ಮುಸ್ತಾಫ, ಕೆಪಿಸಿಸಿ ಸದಸ್ಯ ಡಾ.ರಘು ಮೊದಲಾದವರು ಮಾತನಾಡಿದರು. ಮುಖಂಡರಾದ ಸಂಶುದ್ದೀನ್, ಬೀರಾಮೊಯಿದ್ದೀನ್, ಸುಧೀರ್ ರೈ ಮೇನಾಲ, ಆರ್.ಕೆ.ಮಹಮ್ಮದ್, ಯತೀಶ್ ಗೌಡ, ಪುರುಷೋತ್ತಮ ಬಂಗಾರಕೋಡಿ, ರವಿ ಕೊಡಿಯಾಲ್‌ಬೈಲ್, ಪಿ.ಎ.ಮಹಮ್ಮದ್, ಹರಿಪ್ರಕಾಶ್ ಅಡ್ಕಾರ್, ಜೂಲಿಯಾ ಕ್ರಾಸ್ತಾ, ಸತ್ಯಕುಮಾರ್ ಆಡಿಂಜ, ಇಬ್ರಾಹಿಂ ಕತ್ತಾರ್, ಅಬ್ದುಲ್ ಮಜೀದ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry