ಮಂಗಳವಾರ, ಜೂನ್ 15, 2021
22 °C

ಶ್ರಮಿಕರ ಬದುಕಿನ ಜತೆ ಚೆಲ್ಲಾಟ ಸರಿಯಲ್ಲ:ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರಮಿಕರ ಬದುಕಿನ ಜತೆ ಚೆಲ್ಲಾಟ ಸರಿಯಲ್ಲ:ಬಿಎಸ್‌ವೈ

ಭದ್ರಾವತಿ: ‘ದೈನಂದಿನ ದುಡಿಮೆ ಯಿಂದ ಬದುಕು ನಡೆಸುವ ಜನರ ಜತೆ ಸರ್ಕಾರ ಚೆಲ್ಲಾಟ ಮಾಡುವುದು ಸರಿಯಲ್ಲ’

ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು.ಇಲ್ಲಿನ ತರೀಕೆರೆ ರಸ್ತೆಯಲ್ಲಿ ಭಾನುವಾರ ಬಿಜೆಪಿ ಏರ್ಪಡಿಸಿದ್ದ ಕಟ್ಟಡ ಕಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರದ ಮರಳುನೀತಿ ವಿರುದ್ಧ ಆಕ್ರೋಶ ವ್ಯಕ್ತ ಮಾಡಿದ ಪರಿ ಹೀಗಿತ್ತು.ಸರ್ಕಾರ ಮರಳು, ಜೆಲ್ಲಿ ಹಾಗೂ ಇನ್ನಿತರೆ ಕಟ್ಟಡ ಸಾಮಗ್ರಿಗಳ ಕುರಿತು ಮಾಡಿರುವ ಹೊಸನೀತಿಗಳು ಕಾರ್ಮಿಕರಿಗೆ, ಲಾರಿ ಮಾಲೀಕರ ಬದುಕಿಗೆ ಕಂಟಕವಾಗಿದೆ. ಇದನ್ನು ಸರಿಯಾಗಿ ಅರಿಯದ ಅಧಿಕಾರಿಗಳು ಮರಳು, ಹಿಡಿದು ಲಾರಿ

ನಿಲ್ಲಿಸುವುದೇ ತಮ್ಮ ಗುರಿ ಎಂಬ ರೀತಿಯಲ್ಲಿ ಆಡಳಿತ ನಡೆಸಿರುವುದು ಸರಿಯಲ್ಲ ಎಂದು ತಮ್ಮ ಆಕ್ಷೇಪವನ್ನು ಹೊರ ಹಾಕಿದರು.ತಾವು ಅಧಿಕಾರದಲ್ಲಿದ್ದಾಗ ಅಸಂಘಟಿತ ವಲಯದ ಕಾರ್ಮಿಕರ ಭದ್ರತೆಗೆ ಹಲವು ಕ್ರಮ ಜರುಗಿಸಿದ್ದನ್ನು ನೆನೆದ ಅವರು ಇಎಸ್ಐ ಸೌಲಭ್ಯ ಒಂದು ಕೊಡಿಸಲು ಸಾಧ್ಯವಾಗಿಲ್ಲ, ಅದನ್ನು ಪ್ರಯತ್ನ ಮಾಡಿ ಕೊಡಿಸುವ ಭರವಸೆ ನೀಡಿದರು.ಸಭೆಯಲ್ಲಿ ಆಯನೂರು ಮಂಜುನಾಥ್, ನಗರಸಭಾ ಸದಸ್ಯರಾದ ಜಿ.ಆನಂದಕುಮಾರ್, ವಿ. ಕದಿರೇಶ್ ಮಾತನಾಡಿದರು.ಕೆ.ಎಸ್‌.ಈಶ್ವರಪ್ಪ, ಸಿದ್ದರಾಮಣ್ಣ, ಔರದ್ ಶಾಸಕ ಪ್ರಭುಚೌವ್ಹಾಣ್, ಕಟ್ಟಡ ಕಾರ್ಮಿಕರ ಸಂಘದ ನಾಗರಾಜ್‌, ಅಂತೋಣಿಕ್ರೂಸ್, ಮಣಿ, ಶ್ರೀನಾಥ್ ಉಪಸ್ಥಿತರಿದ್ದರು.ಧಿಕ್ಕಾರ–ಜೈಕಾರ...

ಭದ್ರಾವತಿ ಅಂತರಗಂಗೆ ಗ್ರಾಮದಲ್ಲಿನ ಸಭೆಗೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಆಗಮಿಸಿದ ವೇಳೆ ಅವರದೆ ಪಕ್ಷದ ಕಾರ್ಯಕರ್ತರು ಎನ್ನಲಾದ ಕೆಲವರು ಧಿಕ್ಕಾರದ ಘೋಷಣೆ ಮೊಳಗಿಸಿದರೆ, ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಜೈಕಾರ ಹಾಕಿ ಅಚ್ಚರಿ ಮೂಡಿಸಿದ್ದಾರೆ.ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ ಜೆಡಿಎಸ್‌ ಕಾರ್ಯಕರ್ತರು ಸಹಾಯ ಕೋರಿದಾಗ ಆಯನೂರು ಮಂಜುನಥ್ ತಮ್ಮ ನಿಧಿಯಿಂದ ಹಣ ನೀಡಿದ್ದಾರೆ, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಅಸಮಾಧಾನ ಈ ಧಿಕ್ಕಾರ–ಜೈಕಾರ ಘಟನೆಗೆ ನಾಂದಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.