ಶ್ರಮ ಸಂಸ್ಕೃತಿ ಬೆಳೆಯಲಿ

7

ಶ್ರಮ ಸಂಸ್ಕೃತಿ ಬೆಳೆಯಲಿ

Published:
Updated:

ಕುಡಚಿ (ರಾಯಬಾಗ): ‘ಯಾವ ದೇಶದಲ್ಲಿ ದುಡಿಮೆ ಹಾಗೂ ಪ್ರಾಮಾಣಿಕತೆ ಇರುವುದಿಲ್ಲವೋ ಅಂತಹ ದೇಶಕ್ಕೆ ಭವಿಷ್ಯ ಇಲ್ಲ’ ಎಂದು ವಿಜಾಪುರದ ಡಾ.ಎಂ.ಎನ್.ವಾಲಿ ಅಭಿಪ್ರಾಯಪಟ್ಟರು.ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ‘ಅವಿಭಕ್ತ ಕುಟುಂಬದ ನೆಮ್ಮದಿ ಹಾಗೂ ಸಂಬಂಧ’  ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.‘ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿವೆ.ದುಡಿಮೆ ಹಾಗೂ ಪ್ರಾಮಾಣಿಕತೆ ಇಲ್ಲದಾಗಿದೆ. ದುಡಿಯುವ ಕೈಗಳಿದ್ದರೂ ಸಹ ದುಡಿಮೆ ಇಲ್ಲದಾಗಿದೆ. ಇದು ಸಮಾಜದ ಹಾಗೂ ದೇಶದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಶ್ರಮ ಸಂಸ್ಕೃತಿ ಬೆಳೆಯಬೇಕು ಎಂದರು.ಪರಮಾನಂದವಾಡಿಯ ಅಭಿನವ ಬ್ರಹ್ಮಾನಂದ ಸ್ವಾಮಿಗಳು,  ನಮ್ಮ ಮಾರ್ಗ ಹಾಗೂ ಗುರಿ ಒಂದೇ ಆಗಿರಬೇಕು, ಅಂದಾಗ  ಯಶಸ್ಸು ಸಾಧಿಸಲು ಸಾಧ್ಯ.  ನಮಗೆ ನಾವೇ ದಾರಿ ದೀಪವಾಗಬೇಕು ಎಂದು ಹೇಳಿದರು.ಬೈಲವಾಡದ ಗುರುಪ್ರಸಾದ ಸ್ವಾಮಿ, ರನ್ನತಿಮ್ಮಾಪುರದ ಶಿವಾನಂದ ಸ್ವಾಮಿ, ಬಾಲ್ಕಿಯ ಮಹಾಲಿಂಗ ಸ್ವಾಮಿ, ಬಾಲಗಾವಿಯ ಯೋಗಾನಂದ ಸ್ವಾಮಿ, ಶಿವಣಗಿಯ ಶಿವಲಿಂಗ ಸ್ವಾಮಿ ಮತ್ತಿತರರು ಅವಿಭಕ್ತ ಕುಟುಂಬ ಹಾಗೂ ಸಂಬಂಧಗಳ ಕುರಿತು ಮಾತನಾಡಿದರು.ಮಹೇಶಾನಂದ  ಸ್ವಾಮಿಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಗೋಕಾಕ ಭಾವಸಂಗಮದ ಕಲಾವಿದೆ ಮಾಲಾ ಭುವಿ ಹಾಗೂ ಈಶ್ವರಚಂದ್ರ ಬೆಟಗೇರಿ ಏಕಪಾತ್ರಾಭಿನಯ ಪ್ರದರ್ಶಿಸಿದರು.ಹಾಲಪ್ಪ ಘಾಳಿ, ಡಿ.ಎಸ್. ನಾಯ್ಕ, ಪಾರೀಸ ಉಗಾರೆ, ಬಾಬಾಜಾನ್ ಮಗದುಮ, ಶ್ರೀಶೈಲ ದರೂರ, ಶ್ರೀಶೈಲ ಪಾಲಬಾವಿ, ಕುಮಾರ ಸನದಿ, ಎ.ಬಿ. ಪಾಟೀಲ, ಮಹಾದೇವ ಚವ್ಹಾಣ, ಜಯವೀರ ಹುಂಚಿಮಾರ, ಮಹೇಶ ಪಟ್ಟಣಶೆಟ್ಟಿ, ಗಜಾನನ ಕಾಗೆ, ಶಾಂತಾರಾಮ ಸಣ್ಣಕ್ಕಿ, ಡಾ.ಸಂಜೀವ ಕದ್ದು, ಸುಕುಮಾರ ಪಾಟೀಲ, ಈಶ್ವರ ಗಿಣಿಮೂಗೆ, ಎಲ್.ಎಸ್. ಚೌರಿ, ಇಕ್ಬಾಲ ಚಮನಶೇಖ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಎ.ಬಿ.ಪಾಟೀಲ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry