ಬುಧವಾರ, ಜನವರಿ 22, 2020
20 °C

ಶ್ರೀಕಂಠದತ್ತ ಒಡೆಯರ್ ನಿಧನಕ್ಕೆ ಸಂತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮೈಸೂರು ರಾಜಮನೆ­ತನದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಹಿನ್ನೆಲೆಯಲ್ಲಿ ಅವಳಿ ನಗರದ ವಿವಿಧ ಸಂಘ–ಸಂಸ್ಥೆಗಳು, ಸಂಘಟನೆಗಳು ಹಾಗೂ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಒಡೆಯರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ಬಿಜೆಪಿ ಯುವ ಮೋರ್ಚಾ: ಮಂಗಳವಾರ ಸಭೆ ಸೇರಿ ಸಂತಾಪ ವ್ಯಕ್ತಪಡಿಸಲಾಯಿತು. ಸಭೆಯಲ್ಲಿ ಯುವ  ಮೋರ್ಚಾ ಅಧ್ಯಕ್ಷ ರಾಜು ವಿ.ಜರತಾರಘರ, ಬಿಜೆಪಿ ಮಹಾ­ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಛಬ್ಬಿ, ಮುಖಂಡರಾದ ಚಂದ್ರು ಗಾಯಕವಾಡ, ಜಗದೀಶ ಕಂಬಳಿ, ಮೋಹನಲಾಲ ಜೈನ, ರಂಗಾ ಕಠಾರೆ, ಮಲ್ಲಿಕಾರ್ಜುನ ಮರಿ­ಗೌಡ್ರ, ಹನುಮಂತ ದೊಡ್ಡ­ಮನಿ ಪಾಲ್ಗೊಂಡಿದ್ದರು.ವ್ಯಾಪಾರಸ್ಥರ ಸಂಘ: ಒಡೆಯರ್ ನಿಧನದಿಂದ ರಾಜ್ಯ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಂ­ತಾಗಿದೆ ಎಂದು ಹುಬ್ಬಳ್ಳಿಯ ಅಮರ­ಗೋಳ ಎಪಿಎಂಸಿಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ತಿಳಿಸಿದ್ದಾರೆ. ಪಂಚಮಸಾಲಿ ಸಮಾಜ ಶಹರ ಘಟಕ: ಮಂಗಳವಾರ ಸಂಜೆ ಅಯೋಧ್ಯಾ­ನಗರದ ಗಾಂಧಿ ಭವನದಲ್ಲಿ ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಟ್ರಸ್ಟ್ ವತಿ­ಯಿಂದ ಸಂತಾಪ ಸಭೆ ನಡೆಸಲಾಯಿತು.ಸಮಾಜದ ಮುಖಂಡ­ರಾದ ನೀಲಕಂಠ ಅಸೂಟಿ, ಶಿವಾನಂದ ಬೆಲ್ಲದ, ರಾಜಶೇಖರ ಮೆಣಸಿನ­ಕಾಯಿ, ಕಲ್ಲಪ್ಪ ಯಲಿವಾಳ, ಗಿರೀಶ ಸುಂಕದ, ಕುಮಾರ ಕುಂದನಹಳ್ಳಿ, ಬಸವರಾಜ ಕಿತ್ತೂರ,ಮಹೇಶ ಕಂಬಾರ, ರವಿ ಹೊಸೂರ, ಓಂ ಸಂಗಮೇಶ ಹಾಜರಿದ್ದರು

ಪ್ರತಿಕ್ರಿಯಿಸಿ (+)