ಭಾನುವಾರ, ಮೇ 9, 2021
19 °C

ಶ್ರೀಕಾಂತ್ ಮೇಲೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಪಿಟಿಐ): ಥಾಯ್ಲೆಂಡ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡು ಆತ್ಮವಿಶ್ವಾಸದಲ್ಲಿರುವ ಭಾರತದ ಕೆ. ಶ್ರೀಕಾಂತ್ ಮಂಗಳವಾರ ಇಲ್ಲಿ ಆರಂಭಗೊಳ್ಳಲಿರುವ ಸಿಂಗಪುರ ಸೂಪರ್ ಸರಣಿಯಲ್ಲಿ ಮಿಂಚಿನ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಶ್ರೀಕಾಂತ್ ಸ್ವಿಡನ್ನಿನ ಹೆನ್ರಿ ಹುರ್ಸಕೈನೆನ್ ವಿರುದ್ಧ ಸೆಣಸಲಿದ್ದಾರೆ.ಇದೇ ಸುತ್ತಿನ ಇತರ ಪಂದ್ಯಗಳಲ್ಲಿ ಭಾರತದ ಎಚ್.ಎಸ್.ಪ್ರಣಯ್, ಫಿನ್ಲೆಂಡ್‌ನ ವಿಲ್ಲೆ ಲಾಂಗ್ ಅವರನ್ನು; ಹಿರಿಯ ಆಟಗಾರ ಅರವಿಂದ್ ಭಟ್ ಐರ್ಲೆಂಡ್‌ನ ಸ್ಕಾಟ್ ಇವಾನ್ಸ್ ಅವರನ್ನು ಎದುರಿಸಲಿದ್ದಾರೆ. ಸಾಯಿ ಪ್ರಣೀತ್ ಜಪಾನಿನ ಕೆಂಟೊ ಮೊಮೊಟಾ ವಿರುದ್ಧ ಹೋರಾಟ ನಡೆಸಲಿದ್ದಾರೆ.ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ.ಸಿ.ತುಳಸಿ ಅವರು ಕಾವೊರಿ ಇಮಾಬೆಪು ಎದುರು ಹಾಗೂ ಅರುಂಧತಿ ಪಂತವಾನೆ ರಷ್ಯಾದ ಅನ್ನಾ ಅಸ್ತ್ರಖಂತ್ಸೆವಾ ವಿರುದ್ಧ ಸೆಣಸಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಪ್ರಜಕ್ತಾ ಸಾವಂತ್ ಸ್ಥಳೀಯ ವೆಯ್ ಹನ್ ತಾನ್ ಮತ್ತು ಡೆಲ್ಲಿಸ್ ಯುಲಿಯಾನಾ ಜೋಡಿಯನ್ನು ಎದುರಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.