ಶುಕ್ರವಾರ, ಏಪ್ರಿಲ್ 23, 2021
24 °C

ಶ್ರೀಕೃಷ್ಣ ಜನ್ಮಾಷ್ಟಮಿ ಸ್ಪರ್ಧೆಯಲ್ಲಿ ಮಕ್ಕಳ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಾನುವಾರ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಚಿಣ್ಣರು ಸಂಭ್ರಮದಿಂದ ಪಾಲ್ಗೊಂಡರು.ಮರಗೋಡು ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧಾ ಕಾರ್ಯಕ್ರಮವನ್ನು ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಡುವಂಡ್ರ ಲಕ್ಷ್ಮೀಪತಿ ಉದ್ಘಾಟಿಸಿದರು. ಅತಿಥಿಯಾಗಿ ಪತ್ರ ಕರ್ತ ಕುಡೆಕಲ್ ಸಂತೋಷ್ ಭಾಗವಹಿಸಿದ್ದರು.ಅಧ್ಯಕ್ಷತೆಯನ್ನು ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂದ್ರೀರ ಮೋಹನ್‌ದಾಸ್ ವಹಿಸಿದ್ದರು. ಮರಗೋಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಣತ್ತಲೆ ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಕಡ್ಡಿ ಸುಂದರ, ಸಂಘದ ಕಾರ್ಯದರ್ಶಿ ಐಮಂಡ ಅನಂತ್, ನಿರ್ದೇಶಕರಾದ  ಚೀಯಂಡಿರ ಉತ್ತಪ್ಪ, ಕಟ್ಟೆಮನೆ ಸೋನಾಜಿತ್, ಕಾನಡ್ಕ ಹನೀಶ್, ತೋಟಂಬೈಲು ಪ್ರದೀಪ್, ಬೊಳ್ಳೂರು ಕರ್ಣಾಕರ್, ಪುಳಕಂಡ್ರ ಸಂದೀಪ್, ಎಚ್.ಎಸ್. ಸುಧೀರ್, ಸಿ.ಜೆ. ತಾರಾದೇವಿ ಇದ್ದರು.ವಿಜೇತರು: ಆರು ವರ್ಷದ ಒಳಗಿನ ಪುಟಾಣಿ ಮಕ್ಕಳ ಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ ಯಶ್ ಕಾರ್ಯಪ್ಪ (ಪ್ರಥಮ), ಹೊನಾಲಿ ಕರುಣಾಕರ್ (ದ್ವಿತೀಯ), ರಾಧೆ ಛದ್ಮವೇಷದಲ್ಲಿ ದರ್ಶಿನಿ (ಪ್ರಥಮ), ಐಮಂಡ ಮಾನ್ಯ ಅನಂತ್ (ದ್ವಿತೀಯ), ಸಂಘದ ಸದಸ್ಯರಿಗೆ ಏರ್ಪಡಿಸಲಾಗಿದ್ದ ಪುರುಷರ 5 ನಿಮಿಷದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಕಾನಡ್ಕ ತಿಲಕ್ ರಾಜ್ (ಪ್ರಥಮ), ಕರ್ಣಯ್ಯನ ಭರತ್ (ದ್ವಿತೀಯ), ಮಹಿಳೆಯರ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಕಾನಡ್ಕ ಆಶಾ ಹನೀಶ್ (ಪ್ರಥಮ), ಮಂದ್ರೀರ ಜೋಷಿ ಹಾಗೂ ಕಟ್ಟೆಮನೆ ಲಲಿತ (ದ್ವಿತೀಯ) ಸ್ಥಾನ ಪಡೆದುಕೊಂಡರು.ಶ್ರೀಕೃಷ್ಣ ರುಕ್ಮಿಣಿ ಓಟದಲ್ಲಿ ಕಾನಡ್ಕ ಹನೀಶ್ ದಂಪತಿ (ಪ್ರಥಮ), ಐಮಂಡ ಮಹೇಶ್ ಕುಮಾರ್ ದಂಪತಿ (ದ್ವಿತೀಯ), ಮೊಸರು ಕುಡಿಕೆ ಒಡೆಯುವ ಪುರುಷರ ಸ್ಪರ್ಧೆಯಲ್ಲಿ ಐಮಂಡ ಮಹೇಶ್ ಕುಮಾರ್ (ಪ್ರಥಮ), ಮಹಿಳೆಯರ ಮೊಸರು ಕುಡಿಕೆ ಒಡೆಯುವ ಮಹಿಳೆಯರ ಸ್ಪರ್ಧೆಯಲ್ಲಿ ಐಮಂಡ ಪೂವಪ್ಪ ಭಾಸ್ಕರ್ (ಪ್ರಥಮ), ಮಕ್ಕಳ ವಿಭಾಗದಲ್ಲಿ ಬೊಳ್ಳೂರು ಲಿಖಿತ (ಪ್ರಥಮ) ಬಹುಮಾನ ಪಡೆದರು.

 

ಬಳಿಕ ಭಾರತೀಯ ನೃತ್ಯಕಲಾ ಶಾಲೆ ಮರಗೋಡು ಶಾಖೆಯ ತಂಡದವರಿಂದ ಸಾಮೂಹಿಕ ನೃತ್ಯ ಕಾರ್ಯಕ್ರಮ ನಡೆಯಿತು. ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸಿ.ಜೆ. ತಾರಾದೇವಿ ಪ್ರಾರ್ಥಿಸಿ, ಕಾನಡ್ಕ ಹನೀಶ್ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.