ಭಾನುವಾರ, ಮೇ 22, 2022
22 °C

ಶ್ರೀಜಾ ಪ್ರಕರಣ: ತನಿಖೆ ಬಳಿಕ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲುಗು ಚಿತ್ರನಟ ಚಿರಂಜೀವಿ ಅವರ ಎರಡನೇ ಪುತ್ರಿ ಶ್ರೀಜಾ ಅವರು ತಮ್ಮ ಅತ್ತೆ ಹಾಗೂ ಪತಿ ವಿರುದ್ಧ ಸಲ್ಲಿಸಿರುವ ವರದಕ್ಷಿಣೆ ಕಿರುಕುಳ ದೂರಿನ ಬಗ್ಗೆ ಸಮಗ್ರ ತನಿಖೆ ನಡೆಸಿದ ಬಳಿಕವಷ್ಟೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಹೆಚ್ಚುವರಿ ವರದಕ್ಷಿಣೆ ನೀಡುವಂತೆ ಪತಿ ಶಿರೀಷ್ ಭಾರದ್ವಾಜ್ ಮತ್ತು ಅತ್ತೆ ಸೂರ್ಯಮಣಿ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಶ್ರೀಜಾ ನಗರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ವರದಕ್ಷಿಣೆಗೆ ಸಂಬಂಧಿಸಿದಂತೆ ಕಿರುಕುಳ ನೀಡಿದಾಗಲೆಲ್ಲಾ ತಂದೆ ಚಿರಂಜೀವಿ ಮತ್ತು ಕುಟುಂಬದ ಇತರ ಸದಸ್ಯರಿಗೆ ಇ-ಮೇಲ್ ಮತ್ತು ಎಸ್‌ಎಂಎಸ್ ಮಾಡಿದ್ದಾಗಿ ಅವರು ದೂರಿನಲ್ಲಿ ವಿವರಿಸಿದ್ದಾರೆ.‘ನನ್ನ ಪತಿ ಹಾಗೂ ಅವನ ತಾಯಿ ಸೇರಿ ನನಗೆ ಮನಬಂದಂತೆ ಹೊಡೆದು, ಒದ್ದು ಗಾಯಗೊಳಿಸಿದ್ದಾರೆ. ಅಲ್ಲದೇ ಎರಡು ದಿನಗಳ ತನಕ ನನ್ನಿಂದ ನನ್ನ ಮಗುವನ್ನು ದೂರ ಇಟ್ಟಿದ್ದರು’ ಎಂದು ಶ್ರೀಜಾ ತಿಳಿಸಿದ್ದಾರೆ. ಆದರೆ ಇದೇ ವೇಳೆ ತಮ್ಮ ಮಾವನನ್ನು ‘ಒಬ್ಬ ಒಳ್ಳೆಯ ವ್ಯಕ್ತಿ’ ಎಂದು ಹೇಳಿದ್ದಾರೆ.ಶ್ರೀಜಾಳ ವೈದ್ಯಕೀಯ ಪರೀಕ್ಷೆಯ ದಾಖಲೆ, ಬಿಲ್‌ಗಳು ಮತ್ತು ಕುಟುಂಬದವರಿಗೆ ಕಳುಹಿಸಿರುವ ಎಸ್‌ಎಂಎಸ್, ಇ-ಮೇಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.