ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ವಿವೇಕ ಶಾನಭಾಗ ಆಯ್ಕೆ

7

ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ವಿವೇಕ ಶಾನಭಾಗ ಆಯ್ಕೆ

Published:
Updated:

ಶಿರಸಿ: ಪ್ರಸಕ್ತ ಸಾಲಿನ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿಗೆ  ವಿವೇಕ ಶಾನಭಾಗ ಆಯ್ಕೆ ಆಗಿದ್ದಾರೆ.  ಈ ಪ್ರಶಸ್ತಿ ಸ್ಮರಣಿಕೆ ಮತ್ತು ರೂ.5000 ನಗದು  ಒಳಗೊಂಡಿದೆ. ವಿವೇಕ ಶಾನಭಾಗ ಉತ್ತರ ಕನ್ನಡ ಜಿಲ್ಲೆಯವರು. ಏಳು ವರ್ಷ ಕಾಲ `ದೇಶಕಾಲ~ ಸಾಹಿತ್ಯಕ ತ್ರೈಮಾಸಿಕ ಸಂಪಾದಿಸಿದವರು.  `ಅಂಕುರ~, `ಲಂಗರು~, `ಹುಲಿ ಸವಾರಿ~, `ಮತ್ತೊಬ್ಬನ ಸಂಸಾರ~- ಇವು ಶಾನಭಾಗ ಅವರ ನಾಲ್ಕು ಕಥಾ ಸಂಕಲನಗಳು, `ಇನ್ನೂ ಒಂದು~, `ಒಂದು ಬದಿ ಕಡಲು~ ಕಾದಂಬರಿ, `ಸಕ್ಕರೆ ಬೊಂಬೆ~, `ಬಹುಮುಖಿ~ ಎರಡು ನಾಟಕ ಪ್ರಕಟಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry