ಶ್ರೀನಿವಾಸನ್‌ ಬೆಂಬಲಕ್ಕೆ ರವಿಶಾಸ್ತ್ರಿ

7

ಶ್ರೀನಿವಾಸನ್‌ ಬೆಂಬಲಕ್ಕೆ ರವಿಶಾಸ್ತ್ರಿ

Published:
Updated:

ಮುಂಬೈ (ಪಿಟಿಐ): ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌­ರೌಂಡರ್‌ ರವಿಶಾಸ್ತ್ರಿ ಅವರು ಬಿಸಿಸಿಐನ ‘ಅಧಿಕಾರರಹಿತ ಅಧ್ಯಕ್ಷ’ ಎನ್‌. ಶ್ರೀನಿವಾಸನ್‌ ಬೆಂಬಲಕ್ಕೆ ನಿಂತಿದ್ದಾರೆ.‘ನಾನು ಶ್ರೀನಿವಾಸನ್‌ ಅವರ ಸ್ಥಾನದಲ್ಲಿದ್ದರೆ ರಾಜಿ­ೀನಾಮೆ­ಯನ್ನೇ ನೀಡುತ್ತಿರಲಿಲ್ಲ’ ಎಂದು ವೀಕ್ಷಕ ವಿವರಣೆಗಾರರಾ­ಗಿರುವ ಅವರು ಹೇಳಿದರು.‘ಶ್ರೀನಿವಾಸನ್‌ ಸ್ಥಾನದಲ್ಲಿದ್ದರೆ (ಬಿಸಿಸಿಐ ಅಧ್ಯಕ್ಷ) ನೀವು ಏನು ಮಾಡುತ್ತಿದ್ದೀರಿ ಎಂದು ಹಲವು ಮಂದಿ ನನ್ನಲ್ಲಿ ಕೇಳಿದ್ದಾರೆ. ನಾನು ಕೂಡಾ ರಾಜೀನಾಮೆ ನೀಡುತ್ತಿರಲಿಲ್ಲ’ ಎಂದು ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಿಳಿಸಿದರು.‘ಅಧಿಕಾರದಿಂದ ದೂರ ಸರಿಯುವ ಮೂಲಕ ಶ್ರೀನಿವಾ­ಸನ್‌ ಅವರು ವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.ಶ್ರೀನಿವಾಸನ್‌ ‘ಒಬ್ಬ ಉತ್ತಮ ಆಡಳಿತಗಾರ’ ಎಂದು ಬಣ್ಣಿಸಿದ ರವಿಶಾಸ್ತ್ರಿ, ‘ಅವರೊಬ್ಬ ನಿಜ-­ವಾದ ಕ್ರೀಡಾ ಹಾಗೂ ಕ್ರಿಕೆಟ್‌ ಪ್ರೇಮಿ. ಬಿಸಿಸಿಐಗೆ ಸಾಕಷ್ಟು ಕೊಡುಗೆ ಸಲ್ಲಿಸಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry