ಶ್ರೀನಿವಾಸನ ಬ್ರಹ್ಮರಥ

ಬುಧವಾರ, ಜೂಲೈ 17, 2019
27 °C

ಶ್ರೀನಿವಾಸನ ಬ್ರಹ್ಮರಥ

Published:
Updated:

ಕಲ್ಯಾಣಪುರಿ ಎಂದೇ ಹೆಸರುವಾಸಿಯಾದ ಮಹಾಲಕ್ಷ್ಮೀಪುರಂನ ಮರಿ ತಿರುಪತಿಯ ಶ್ರೀನಿವಾಸ ದೇವರ ವಿಜೃಂಭಣೆಯ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದೆ.

ಉತ್ಸವದ ಅಂಗವಾಗಿ ಶ್ರೀನಿವಾಸ ಹಾಗೂ ಅಮ್ಮನವರಿಗೆ ವಜ್ರಕವಚಧಾರಣೆ ಮತ್ತು ಕಣ್ಮನ ತಣಿಸುವಂತೆ ಹೂವಿನ ಅಲಂಕಾರ ಮಾಡಲಾಗುತ್ತದೆ. ಬೆಳಗಿನಿಂದಲೇ ಅನೇಕ ಪೂಜಾ ಕೈಂಕರ್ಯ, ಭಕ್ತರಿಂದ ನಿರಂತರ ಭಜನೆ ನಡೆಯುತ್ತದೆ.

ರಥೋತ್ಸವದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಇರುತ್ತದೆ.  ಸಂಜೆ 6.30ಕ್ಕೆ ಶ್ರೀನಿವಾಸ ದೇವರಿಗೆ ಧೂಳೋತ್ಸವ ಹಾಗೂ ಊಂಜಲ್ ಸೇವೆ ನಡೆಯುತ್ತದೆ.

ಭಾನುವಾರ ಬೆಳಿಗ್ಗೆ 9ಕ್ಕೆ ಮಹಾಭಿಷೇಕ, ಅವಭೃತ, ವಸಂತೋತ್ಸವ, ಮಹಾಮಂಗಳಾರತಿ. ಸಂಜೆ 6.30ಕ್ಕೆ ವೈರಮುಡಿ ಉತ್ಸವ ನಡೆಸಲಾಗುತ್ತದೆ.

ಸೋಮವಾರ ಬೆಳಿಗ್ಗೆ 10.30ಕ್ಕೆ ದ್ವಾದಶ ತಿರುವಾರಾಧನೆ, ಮಹಾಮಂಗಳಾರತಿ ಇರುತ್ತದೆ. ಸಂಜೆ 6.30ಕ್ಕೆ ಶಯನೋತ್ಸವ ನಡೆಯಲಿದೆ ಎಂದು ಸಮಿತಿ ಕಾರ್ಯದರ್ಶಿ ಸಿ.ಡಿ. ಕೆಂಪರಾಜ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry