ಶುಕ್ರವಾರ, ಜೂನ್ 25, 2021
22 °C

ಶ್ರೀನಿವಾಸ್ ಕೊಲೆ: ನಾಲ್ವರು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಸದಸ್ಯೆ ಮಂಜುಳಾದೇವಿ ಅವರ ಪತಿ ಶ್ರೀನಿವಾಸ್ ಕೊಲೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಾಲ್ವರು ಶಂಕಿತರನ್ನು ತಮಿಳು ನಾಡಿನಲ್ಲಿ ವಶಕ್ಕೆ ಪಡೆದಿದ್ದು, ಒಂದೆರೆಡು ದಿನಗಳಲ್ಲಿ ಪ್ರಕರಣ ಭೇದಿಸುವ ವಿಶ್ವಾಸ  ವ್ಯಕ್ತಪಡಿಸಿದ್ದಾರೆ.2008ರಲ್ಲಿ ಶ್ರೀನಿವಾಸ್‌ ಅವರ ಕೊಲೆಗೆ ಯತ್ನಿಸಿದ್ದ ಪ್ರತಾಪ್, ಹರೀಶ್ ಅಲಿಯಾಸ್ ಪಕ್ಕ, ನವೀನ್ ಮತ್ತು ಅರುಣ್ ಎಂಬುವರನ್ನು ವಶಕ್ಕೆ ಪಡೆಯ ಲಾಗಿದೆ. ಶ್ರೀನಿವಾಸ್ ಕೊಲೆಯಾದ ನಂತರ ಈ ನಾಲ್ಕು ಮಂದಿ ತಮಿಳುನಾಡಿನಲ್ಲಿ ತಲೆಮರೆ ಸಿಕೊಂಡಿದ್ದರು. ಅವರ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತನಿಖಾಧಿ ಕಾರಿಗಳು ಹೇಳಿದ್ದಾರೆ.‘ವಶಕ್ಕೆ ಪಡೆದಿರುವ ನಾಲ್ಕು ಮಂದಿ ಶ್ರೀನಿವಾಸ್ ಕೊಲೆಯಾಗುವ ಕೆಲವೇ ಕ್ಷಣಗಳ ಮುನ್ನ ಆ ಸ್ಥಳದಲ್ಲಿ ಓಡಾಡಿರುವುದು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆ ಯಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‘ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲೇ ಕೊಲೆ ನಡೆದಿರುವ ಸಾಧ್ಯತೆ ಹೆಚ್ಚಿದೆ. ಈವರೆಗೆ 18 ಮಂದಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾ ಗಿದ್ದು, ಪ್ರಕರಣಕ್ಕೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಈ ಹಿಂದೆ ಶ್ರೀನಿವಾಸ್ ಅವರ ಕೊಲೆಗೆ ಯತ್ನಿಸಿದ್ದ ತಂಡದ ಸದಸ್ಯರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬಹು ತೇಕ ದೃಢಪಟ್ಟಿದೆ’ ಎಂದು ಹಿರಿಯ ಅಧಿಕಾರಿ ಗಳು ತಿಳಿಸಿದ್ದಾರೆ. ‘ಕೃತ್ಯದಲ್ಲಿ ರೌಡಿ ಅಜಿತ್‌ ಕೈವಾಡವಿರುವ ಬಗ್ಗೆ ಶ್ರೀನಿವಾಸ್‌ ಕುಟುಂಬ ಸದಸ್ಯರು ಶಂಕಿಸಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ’ ಎಂದು ತನಿಖಾ ಧಿಕಾರಿಗಳು ಹೇಳಿದ್ದಾರೆ.ಸಿಕ್ಕಿ ಬಿದ್ದ ಕಳ್ಳರು: ₨ 19.5 ಲಕ್ಷ ಜಪ್ತಿ

ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಾಗೂ ಕದ್ದ ಮಾಲನ್ನು ಖರೀದಿಸಿದ ಚಿನ್ನಾಭರಣ ಮಳಿಗೆಯೊಂದರ ಮಾಲೀಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಹೊಸಕೋಟೆ ತಾಲ್ಲೂಕಿನ ಬೈಲನರಸಾಪುರ ಗ್ರಾಮದ ಪಾಜಿಲ್‌ ಪಾಷಾ (29) ಮತ್ತು ಅಮಿನ್ ಖಾನ್ (24) ಬಂಧಿತರು. ಅಲ್ಲದೇ, ಕದ್ದ ಮಾಲನ್ನು ಖರೀದಿಸಿದ್ದ ಕೋಲಾರ ಜಿಲ್ಲೆಯ ಅಮ್ಮವಾರಪೇಟೆಯ ಚಿನ್ನಾಭರಣ ವ್ಯಾಪಾರಿ ರಾಜೇಶ್‌ (42) ಅವರನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ₨ 19.5 ಲಕ್ಷ ಮೌಲ್ಯದ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಪಾಜಿಲ್‌ ಮತ್ತು ಅಮಿನ್‌ ಒಂದು ವರ್ಷದ ಅವಧಿಯಲ್ಲಿ ನಗರದ ಕೆ.ಆರ್.ಪುರ, ರಾಮ ಮೂರ್ತಿ ನಗರ, ಮಹದೇವಪುರ, ಭಾರತಿನಗರ, ಬೈಯ್ಯಪ್ಪನ ಹಳ್ಳಿ ಹಾಗೂ ಜೀವನ್‌ಭಿಮಾನಗರ ಠಾಣೆ ವ್ಯಾಪ್ತಿಯ 11 ಮನೆಗಳಲ್ಲಿ ಕಳವು ಮಾಡಿದ್ದರು. ನಂತರ ಆ ಆಭರಣಗಳನ್ನು ನಗರದ ಟ್ಯಾನರಿ ರಸ್ತೆ, ಹೊಸಕೋಟೆ, ಕೋಲಾರದ ಚಿನ್ನಾಭರಣ ಮಳಿಗೆಗಳಿಗೆ ಮಾರಾಟ  ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಆತ್ಮಹತ್ಯೆ

ಬಸವೇಶ್ವರನಗರ ಸಮೀಪದ ಇಂದಿರಾನಗರ ಎಂಟನೇ ಅಡ್ಡರಸ್ತೆಯಲ್ಲಿ ವಿ.ಕುಮಾರ್ (35) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.ಬಡಗಿಯಾಗಿದ್ದ ಕುಮಾರ್, ಈಶ್ವರಿ ಎಂಬುವರನ್ನು ವಿವಾಹವಾಗಿದ್ದರು. ಎರಡು ದಿನಗಳ ಹಿಂದೆ ಮುರುಗೇಶ್‌ಪಾಳ್ಯದ ಅತ್ತೆ ಮನೆಗೆ ಹೋಗಿದ್ದ ಈಶ್ವರಿ, ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ಮನೆಗೆ ವಾಪಸಾಗಿದ್ದಾರೆ. ಆಗ ಪತಿ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾ ಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀ ಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.