ಭಾನುವಾರ, ನವೆಂಬರ್ 17, 2019
24 °C

ಶ್ರೀನಿವಾಸ ಕಾಲೇಜು- ವಿಚಾರ ಸಂಕಿರಣ ಇಂದು

Published:
Updated:

ಮಂಗಳೂರು: ನಗರದ ಶ್ರೀನಿವಾಸ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಮತ್ತು ವಿದ್ಯಾರ್ಥಿ ಪ್ರಬಂಧ ಮಂಡನಾ ಸ್ಪರ್ಧೆಯನ್ನು ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಎಕ್ಸಿಸ್ ಬ್ಯಾಂಕ್ ಸಹಉಪಾಧ್ಯಕ್ಷ ಶಾಮಚಂದ್ರ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಎ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷ ಎ.ಶ್ರೀನಿವಾಸ ರಾವ್ ಭಾಗವಹಿಸಲಿದ್ದಾರೆ.ಕಾರ್ಯಾಗಾರದಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ ಸುಮಾರು 50ಕ್ಕೂ ಮಿಕ್ಕಿ ಉಪನ್ಯಾಸಕರು ಹಾಗೂ ಎಂಬಿಎ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಹಾಗೂ ಸುಮಾರು 250ಕ್ಕೂ ಮಿಕ್ಕಿ ಎಂಬಿಎ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.`ಸಂಜೆ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅನಿಕಾಂತ್ ಇನ್ಸ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕ ಡಾ.ಎಂ.ಎ. ಲಾಹೋರಿ ಅವರು ಭಾಗವಹಿಸಲಿದ್ದಾರೆ' ಎಂದು ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಿವಾಸ ಮಯ್ಯ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಉಪನ್ಯಾಸಕರಾದ ಪ್ರೊ.ಹರಿಪ್ರಕಾಶ್ ಯು.ಪಿ., ಪ್ರೊ. ಕೆ. ರಾಧಾಕೃಷ್ಣನ್, ಪ್ರೊ.ಸುರೇಶ್ ಎಚ್.ಬಿ ಇದ್ದರು.

ಪ್ರತಿಕ್ರಿಯಿಸಿ (+)