ಶ್ರೀಪಾದರಾಜರ ಚಿಂತನೆ ಸಾರ್ವಕಾಲಿಕ: ಪೇಜಾವರ ಶ್ರೀ

7

ಶ್ರೀಪಾದರಾಜರ ಚಿಂತನೆ ಸಾರ್ವಕಾಲಿಕ: ಪೇಜಾವರ ಶ್ರೀ

Published:
Updated:

ಮುಳಬಾಗಲು: ಹರಿದಾಸ ಸಾಹಿತ್ಯದ ಪ್ರವರ್ತಕರಾದ ಶ್ರೀಪಾದರಾಜರ ಚಿಂತನೆ ಸಾರ್ವಕಾಲಿಕ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.ಪಟ್ಟಣದ ಹೊರವಲಯದ ಶ್ರೀಪಾದರಾಜಮಠ ಸಭಾಂಗಣದಲ್ಲಿ ಈಚೆಗೆ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ, ಶ್ರೀಪಾದರಾಜ ರಿಸರ್ಚ್ ಇಂಟರ್‌ನ್ಯಾಷನಲ್ ಫೌಂಡೇಷನ್ ಟ್ರಸ್ಟ್,  ಪ್ರಸನ್ನ ವೆಂಕಟ ಕಲ್ಚರಲ್ ಮತ್ತು ಚಾರಿಟೇಬಲ್ ಫೌಂಡೇಷನ್ ಆಶ್ರಯದಲ್ಲಿ ನಡೆದ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.

ಕೆಲವರ ಸ್ವತ್ತಾಗಿದ್ದ ಸಾಹಿತ್ಯವನ್ನು ಶ್ರೀಪಾದರಾಜರು ಸಮಾಜದ ಪ್ರತಿಯೊಬ್ಬರಿಗೂ ತಮ್ಮ ಕೀರ್ತನೆಗಳ ಮೂಲಕ ಹಾಡಿ ಪ್ರಚುರ ಪಡಿಸಿದರು.  ದಾಸ ಸಾಹಿತ್ಯ ಹಾಗೂ ವ್ಯಾಸ ಸಾಹಿತ್ಯ ಸೂರ್ಯ ಚಂದ್ರ ಇದ್ದಂತೆ ಎಂದು ಬಣ್ಣಿಸಿದ ಶ್ರೀಗಳು,  ಹರಿದಾಸ ಸಾಹಿತ್ಯ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ರವೀಂದ್ರ ಅರವಿಂದಕಟ್ಟೆ ರಚಿಸಿದ ಚಿತ್ರಗಳನ್ನು ಸ್ವಾಮೀಜಿ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.   ಕೇಶವ ನಿಧಿ ತೀರ್ಥ ಸ್ವಾಮೀಜಿ, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಅಧ್ಯಕ್ಷ ಡಾ.ವಿ.ಆರ್.ಪಂಚಮುಖಿ, ಸಮ್ಮೇಳನಾಧ್ಯಕ್ಷ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ, ಸಮ್ಮೇಳನದ ಪ್ರಧಾನ ಸಂಯೋಜಕರಾದ  ಲಕ್ಷ್ಮೀನಾರಾಯಣಾಚಾರ್ಯ, ಎಚ್.ಬಿ.ಜಯರಾಜ್, ನಿರ್ದೇಶಕ ಡಾ.ಸುಭಾಷ್ ಕಾಖಂಡಿಕಿ, ರಾಮ ವಿಠಲಾಚಾರ್, ಮೋಹನ್‌ಚಾರ್, ಡಾ.ಸುರೇಶ್, ಡಾ.ಕೆ.ಗೋಕುಲನಾಥ್ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry