ಮಂಗಳವಾರ, ಮೇ 18, 2021
24 °C

ಶ್ರೀಮಂತರಿಗೆ ಸಬ್ಸಿಡಿ ಗ್ಯಾಸ್ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರಿಮಂತರು, ಮೇಲ್ಮಧ್ಯಮ ವರ್ಗದವರು ಹಾಗೂ 5 ಲಕ್ಷಕ್ಕೂ ಮೇಲ್ಪಟ್ಟು ಆದಾಯ ಇರುವವವರಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಈ ಕುರಿತು ಯೋಚನೆ ಮಾಡುತ್ತಿಲ್ಲ.    ಆರ್ಥಿಕವಾಗಿ ಸಬಲರಾಗಿರುವ ವ್ಯಕ್ತಿಗಳು ಇಂತಹ ಸೌಲಭ್ಯವನ್ನು ಪಡೆಯ ಬಾರದು. ಆದರೆ ಅವರೇ ಇಂಥ ಸೌಲಭ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ವರ್ಗಗಳ ಗ್ರಾಹಕರು ಬಹಿರಂಗ ಮಾರುಕಟ್ಟೆಯಲ್ಲಿ ಸಿಗುವ ಅಡಿಗೆ ಅನಿಲ ಕೊಂಡು ಬಳಸುವ ಮೂಲಕ ಬಡವರಿಗೆ ನೆರವಾಗಬೇಕಿದೆ.ವಿಧವೆಯರಿಗೆ ಮತ್ತು ದಿಕ್ಕಿಲ್ಲದ ವೃದ್ಧರಿಗೆ ಸರ್ಕಾರ ತಿಂಗಳಿಗೆ 500 ರೂ. ವೇತನ ನೀಡಲು ಹಿಂದೆ ಮುಂದೆ ನೋಡುತ್ತದೆ. 25 ಕೆ.ಜಿ. ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುವ ಬಡವರಿಗೆ ತಿಂಗಳಿಗೆ 5 ಕೆ.ಜಿ. ಗ್ಯಾಸ್ ಉಚಿತವಾಗಿ ನೀಡಬಹುದು. ಸರ್ಕಾರ ಈ ಕುರಿತು ಚಿಂತಿಸಬೇಕು.ದೇಶದಲ್ಲಿ ಶ್ರೀಮಂತರ ಸಂಖ್ಯೆ ಜಾಸ್ತಿ ಆಗುತ್ತಿದೆ. ಬಡವರ ಸಂಖ್ಯೆಯ ಹೆಚ್ಚಾಗಿದೆ. ಅಸಹಾಯಕರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳು ಉದಾರ ಮನಸ್ಥಿತಿಯನ್ನು ಉಳ್ಳವರು ಬೆಳೆಸಿಕೊಳ್ಳುವುದು ಯಾವಾಗ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.