ಗುರುವಾರ , ಮೇ 19, 2022
20 °C

ಶ್ರೀಮತಿ ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ತಾಲ್ಲೂಕಿನ ಬಡ ಜನರ ಆರೋಗ್ಯಕರ ಬದುಕಿಗಾಗಿ ಶ್ರೀಮತಿ ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನರು ಸದಸ್ಯರಾಗಿದ್ದಾರೆಂದು ಟ್ರಸ್ಟಿನ ಮ್ಯೋನೇಜಿಂಗ್ ಟ್ರಸ್ಟಿಗಳೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಬುಧವಾರ ನಗರ ಹೊರವಲಯದ ಜಾರಕಿಹೊಳಿ ಕುಟುಂಬದ ತೋಟದಲ್ಲಿ ನಡೆದ  ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಅವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಚಾರಿಟಬಲ್ ಟ್ರಸ್ಟ್‌ನಿಂದ ಚೆಕ್ ವಿತರಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಎಲ್ಲ 6 ಲಕ್ಷ ಜನರನ್ನು ಈ ಟ್ರಸ್ಟಿಗೆ ಸದಸ್ಯರನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಬಡವರ ಅನುಕೂಲಕ್ಕಾಗಿ ನಾಗರಿಕ ಸುರಕ್ಷಾ ಅಪಘಾತ ವಿಮೆ ಯೋಜನೆಯನ್ನು ದಿ ಓರಿಯಂಟಲ್ ಇನ್ಸೂರನ್ಸ್ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸದ್ಯ ಗೋಕಾಕ ತಾಲ್ಲೂಕಿಗೆ ಸೀಮಿತವಾದ ಟ್ರಸ್ಟ್, ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ವಿಸ್ತರಿಸುವ ಯೋಜನೆ ಇದೆ. ಗೋಕಾಕ ತಾಲ್ಲೂಕಿನ ಒಟ್ಟು 4,00,775 ಟ್ರಸ್ಟ್‌ನ ಸದಸ್ಯತ್ವ ಪಡೆದಿದ್ದಾರೆ. ಟ್ರಸ್ಟ್ ವತಿಯಿಂದ ಸದಸ್ಯರಿಗೆ ಬುಧವಾರದಿಂದ ಗುರುತಿನ ಚೀಟಿ ವಿತರಿಸಲಾಗುತ್ತಿದೆ ಎಂದರು.

ಟ್ರಸ್ಟ್‌ನ ಸದಸ್ಯತ್ವ ಪಡೆದವರಲ್ಲಿ ಇದುವರೆಗೆ ಏಳು ಜನರು ಅಪಘಾತ ಪ್ರಕರಣಗಳಲ್ಲಿ ದುರ್ಮರಣಕ್ಕೀಡಾಗಿದ್ದು, ಹಡಗಿನಾಳ ಗ್ರಾಮದ ಮಹಾದೇವಿ ರುದ್ರಪ್ಪ ನಿಂಗನ್ನವರ, ಅರಭಾವಿಯ ಮಾರುತಿ ಲಕ್ಷ್ಮಣ ಮಾಂಗ, ಗೋಕಾಕದ ದಸ್ತಗೀರಸಾಬ ಕತಾಲಸಾಬ ಜಮಾದಾರ, ಯಾದವಾಡದ ಸಿದ್ದಪ್ಪ ಕಲ್ಲಪ್ಪ ಕಟಗಲ್ಲ, ರಾಜಶೇಖರ ಸದಾಶಿವ ಉದಪುಡಿ, ಸಿದ್ದಪ್ಪ ತಮ್ಮಣ್ಣ ಹನಗಂಡಿ ಮತ್ತು ದೇವನಗೌಡ ಗಿರಿಗೌಡ ಪಾಟೀಲ ಹಾಗೂ ಬಾವಿಯಲ್ಲಿ ಬಿದ್ದು ಮೂರು ಜನರು ಮೃತಪಟ್ಟಿದ್ದು, ಹುಣಶ್ಯಾಳ ಪಿಜಿ ಗ್ರಾಮದ ಶಾಂತವ್ವ ಶಂಕರ ಯಾದಗೂಡ, ಬೀರನಗಡ್ಡಿಯ ಸಿದ್ದಪ್ಪ ಸತ್ತೆಪ್ಪ ಚೌಗಲಾ, ಭೀಮಗೌಡ ಮುತ್ತೆಪ್ಪ ಪಾಗದ ಮತ್ತು ಗೋಕಾಕದ ಸಂಗೀತಾ ಭೀಮಶಿ ದಾವಣಿ ಸಿಲಿಂಡರ್ ಸ್ಪೋಟ ಹಾಗೂ ಪಾಮಲದಿನ್ನಿಯ ಕೆಂಪಣ್ಣ ಶಿವರಾಯಿ ಹಿರೇಕುರುಬರ ಅವರು ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ್ದಾರೆ.

ಇವರ ವಾರಸುದಾರರಿಗೆ ತಲಾ 1 ಲಕ್ಷ ರೂ.ಗಳಂತೆ ಚೆಕ್‌ಗಳು ಮತ್ತು ವಾಹನ ಅಪಘಾತದಲ್ಲಿ ಗಾಯಗೊಂಡ ಗೋಕಾಕದ ಶಾಂತಾ ಸದಾಶಿವ ಹುನೂರ, ದಂಡಾಪೂರದ ಪಾವಾಡಿ ಸಿದ್ದಪ್ಪ ಕಿತ್ತೂರ, ವಿದ್ಯುತ್ ಅಪಘಾತದಲ್ಲಿ ಗಾಯಗೊಂಡ ಮೂಡಲಗಿಯ ರಮೇಶ ಗೌಡಪ್ಪ ಪಾಟೀಲ, ಇತರೇ ಅಪಘಾತಗಳಲ್ಲಿ ಗಾಯಗೊಂಡ ಗುಜನಟ್ಟಿಯ ಲಕ್ಕಪ್ಪ ಲಕ್ಷ್ಮಣ ಮುಶಪ್ಪಗೋಳ, ಹಳ್ಳೂರದ ಶ್ರೀಶೈಲ ಮಹಾದೇವ ಅಟಮಟ್ಟಿ ಅವರಿಗೆ ಒಟ್ಟು ರೂ. 1,50,150ಗಳ ಚೆಕ್  ವಿತರಿಸಿದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ 15ಜನರಿಗೆ  ತಲಾ 25 ಸಾವಿರ ಹಾಗೂ ಮೇಲ್ಮಟ್ಟಿಯ ಯಶವಂತ ಹೊನ್ನಿ ಅವರಿಗೆ 10 ಸಾವಿರ ರೂ.ಗಳ ಚೆಕ್ ವಿತರಿಸಿದರು.

ಟ್ರಸ್ಟ್‌ನಿಂದ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು, ಹಳ್ಳೂರ ಗ್ರಾಮದ ದಾನೇಶ್ವರಿ ಮಹಿಳಾ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ 4 ಲಕ್ಷ ರೂಪಾಯಿ ಚೆಕ್ ವಿತರಿಸಿದರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಶುಗರ ಅಧ್ಯಕ್ಷ ಲಖನ್ ಜಾರಕಿಹೊಳಿ, ಹುಬ್ಬಳ್ಳಿ ಓರಿಯಂಟಲ್ ಇನ್ಸೂರನ್ಸ್ ಕಂಪೆನಿಯ ಮುಖ್ಯ ವಿಭಾಗೀಯ ವ್ಯವಸ್ಥಾಪಕ ಡಾ. ಎಲಾಂಗೋ, ಬೆಳಗಾವಿ ವಿಭಾಗೀಯ ವ್ಯವಸ್ಥಾಪಕ ಶಿವರಾಜ ಪಾಟೀಲ, ವೈದ್ಯ ಡಾ. ಗಿರೀಶ ಸೋನವಾಲ್ಕರ,  ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.