ಗುರುವಾರ , ನವೆಂಬರ್ 21, 2019
20 °C

ಶ್ರೀರಂಗನಾಥ ಸ್ವಾಮಿಗೆ ಕೋಟಿ ಬೆಲೆಯ ಕಿರೀಟ

Published:
Updated:

ಮಾಗಡಿ: ತಿರುಮಲ ರಂಗನಾಥ ಸ್ವಾಮಿ ಮೂಲ ದೇವರಿಗೆ ಶ್ರೀರಂಗಸೇವಾ ಟ್ರಸ್ಟ್‌ನ ವತಿಯಿಂದ ರೂ.1 ಕೋಟಿ ಬೆಲೆ ಬಾಳುವ ವಜ್ರಖಚಿತ ಕಿರೀಟವನ್ನು ಅರ್ಪಿಸುತ್ತಿದ್ದೇವೆ ಎಂದು ಟ್ರಸ್ಟ್‌ನ ಅಧ್ಯಕ್ಷ ಟಿ.ಎಸ್ ಸತೀಶ್ ತಿಳಿಸಿದರು.ಇಲ್ಲಿನ ತಿರುಮಲ ಪರಕಾಲ ಮಠದ ಆವರಣದಲ್ಲಿ ಶ್ರೀರಂಗಸೇವಾ ಟ್ರಸ್ಟ್ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.`ಕುಡಿಯುವ ನೀರು ಸಂಗ್ರಹಣೆಗಾಗಿ ದೇವಾಲಯದಲ್ಲಿ ಮಳೆಕೊಯ್ಲು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.ಪ್ರಾಚ್ಯವಸ್ತು ಇಲಾಖೆಯ ವಿಳಂಬದಿಂದಾಗಿ ಪೂರ್ವ ದ್ವಾರದ ಮೇಲಿನ ರಾಯಗೋಪುರ ಜೀರ್ಣೋದ್ಧಾರ ಕಾರ್ಯ ಆರಂಭವಾಗಿಲ್ಲ.ದೇವಾಲಯದ ಸುತ್ತಮುತ್ತಲ ರಥಬೀದಿಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಎಲ್ಲರೂ ಸಹಕರಿಸಬೇಕು' ಎಂದು ಸತೀಶ್ ತಿಳಿಸಿದರು.ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣ ಸ್ವಾಮಿ, ವೆಂಕಟೇಶ್ ಅಯ್ಯಂಗಾರ್, ಟಿ.ಎಸ್ ಪ್ರಭು, ರಾಮಾನುಜಂ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)