ಶ್ರೀರಾಮುಲುಗೆ ಬಿಜೆಪಿ ಅಧಿಕೃತ ಆಮಂತ್ರಣ

7

ಶ್ರೀರಾಮುಲುಗೆ ಬಿಜೆಪಿ ಅಧಿಕೃತ ಆಮಂತ್ರಣ

Published:
Updated:
ಶ್ರೀರಾಮುಲುಗೆ ಬಿಜೆಪಿ ಅಧಿಕೃತ ಆಮಂತ್ರಣ

ಬಳ್ಳಾರಿ:  ಬಳ್ಳಾರಿ ಗ್ರಾಮೀಣ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ನಗರಕ್ಕೆ ಆಗಮಿಸಿರುವ ಆಡಳಿತಾರೂಢ ಬಿಜೆಪಿಯ ವೀಕ್ಷಕರು  ಬಿ.ಶ್ರೀರಾಮುಲು ಅವರನ್ನು ಭೇಟಿಯಾಗಿ ಬಿಜೆಪಿಯಿಂದಲೇ ಸ್ಪರ್ಧಿಸುವಂತೆ  ಮನವಿ ಮಾಡಿದರು.ಚಂಚಲಗುಡಾ ಕಾರಾಗೃಹದಲ್ಲಿರುವ ಜಿ.ಜನಾರ್ದನ ರೆಡ್ಡಿ ಅವರೊಂದಿಗೆ ಚರ್ಚಿಸದ ಹೊರತು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಶ್ರೀರಾಮುಲು ವೀಕ್ಷಕರಿಗೆೆ ತಿಳಿಸಿದರು.ಶ್ರೀರಾಮುಲು ಸೋಮವಾರ ಅಥವಾ ಮಂಗಳವಾರ ರೆಡ್ಡಿ ಅವರನ್ನು ಭೇಟಿಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೆ ಆಗಮಿಸಿ ಚರ್ಚಿಸಲಾಗುವುದು ಎಂದು ವೀಕ್ಷಕರಾಗಿ ಆಗಮಿಸಿರುವ ರಘುನಾಥ ಮಲಕಾಪುರೆ ಸುದ್ದಿಗಾರರಿಗೆ ತಿಳಿಸಿದರು.ಈ ಮುನ್ನ ವೀಕ್ಷಕರು ಶ್ರೀರಾಮುಲು ಅವರ ನಡವಳಿಕೆಯಿಂದ ಗಲಿಬಿಲಿಗೆ ಒಳಗಾದ ಘಟನೆ ನಡೆಯಿತು. ವೀಕ್ಷಕರಾಗಿ ಆಗಮಿಸಿರುವ ರಘುನಾಥ ಮಲಕಾಪುರೆ ಹಾಗೂ ಪ್ರಭುದೇವ ಕಪಗಲ್ ಮಧ್ಯಾಹ್ನ 12ಕ್ಕೆ ಜಿ.ಜನಾರ್ದನ ರೆಡ್ಡಿ ಅವರ ನಿವಾಸದ ಬಳಿಯ ಕುಟೀರದಲ್ಲಿ ಗ್ರಾಮೀಣ ಭಾಗದ ಕಾರ್ಯಕರ್ತರ ಸಭೆ ನಡೆಸುತ್ತಿದ್ದ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಚರ್ಚಿಸಲು ತೆರಳಿದ್ದರು. 

 

`ಕಾರ್ಯಕರ್ತರ ಸಭೆಯ ನಂತರ ಬನ್ನಿ~ ಎಂದು ಅವರಿಗೆ ಖಡಾಖಂಡಿತವಾಗಿ ತಿಳಿ        ಸಿದ್ದರಿಂದ ವೀಕ್ಷಕರು ತೀವ್ರ ಮುಜುಗರಕ್ಕೆ ಒಳಗಾದರು.ನಗರದ ಖಾಸಗಿ ವಸತಿಗೃಹವೊಂದರಲ್ಲಿ ತಂಗಿದ್ದ ವೀಕ್ಷಕರನ್ನು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಕೆ.ರಾಮಲಿಂಗಪ್ಪ ಹಾಗೂ ಮಾಜಿ ಮೇಯರ್ ಬಸವರಾಜ್ ಮತ್ತಿತರರು ಬೆಳಿಗ್ಗೆ ಭೇಟಿ ಮಾಡಿ ಮೂರು ಗಂಟೆಗಳ ಕಾಲ ಚರ್ಚಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲಕಾಪುರೆ, ಬಿಜೆಪಿಯಿಂದ ಶ್ರೀರಾಮುಲು ಅವರನ್ನೇ ಕಣಕ್ಕಿಳಿಸುವ ನಿಟ್ಟಿನಲ್ಲಿ ಚರ್ಚಿಸಿ ಬರುವಂತೆ ಪಕ್ಷದ ವರಿಷ್ಠರು ತಮ್ಮನ್ನು ಬಳ್ಳಾರಿಗೆ ಕಳುಹಿಸಿದ್ದಾರೆ. ಶ್ರೀರಾಮುಲು ಅವರೊಂದಿಗೆ ಚರ್ಚಿಸಿ ವರದಿಯನ್ನು ವರಿಷ್ಠರಿಗೆ ಸಲ್ಲಿಸಾಗುವುದು ಎಂದು ಹೇಳಿದರು.ಮಧ್ಯಾಹ್ನ ಮತ್ತೆ ಕುಟೀರಕ್ಕೆ ಆಗಮಿಸಿ ಶ್ರೀರಾಮುಲು ಅವರನ್ನು ಭೇಟಿಯಾದ ವೀಕ್ಷಕರು ಎರಡು ಗಂಟೆ ಕಾಲ ಚರ್ಚಿಸಿ, ಬಿಜೆಪಿಯಿಂದಲೇ ಚುನಾವಣಾ ಕಣಕ್ಕಿಳಿಯುವಂತೆ ಪಕ್ಷದ ಪರವಾಗಿ ಕೋರಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry