ಗುರುವಾರ , ಅಕ್ಟೋಬರ್ 24, 2019
21 °C

ಶ್ರೀರಾಮುಲು ಹೊಸ ಪಕ್ಷದ ಬ್ಯಾನರ್ ಪ್ರತ್ಯಕ್ಷ

Published:
Updated:

ಬಳ್ಳಾರಿ: ಶಾಸಕ ಬಿ. ಶ್ರೀರಾಮುಲು ಅವರ ಹೊಸ ಪಕ್ಷ ರಚನೆಯ ಬಗ್ಗೆ ರಾಜ್ಯದಾದ್ಯಂತ ಕುತೂಹಲ ಇರುವ ಸಂದರ್ಭದಲ್ಲೇ ಅವರ ಇಲ್ಲಿನ ಕಚೇರಿಯಲ್ಲಿ ಶನಿವಾರ ದಿಢೀರನೆ ಕಾಣಿಸಿಕೊಂಡ ಬ್ಯಾನರ್ ಒಂದು ಅದಕ್ಕೆ ಉತ್ತರ ನೀಡುವಂತಿದೆ.ಆ ಬ್ಯಾನರ್‌ನಲ್ಲಿ ಪಕ್ಷದ ಹೆಸರು, ಚಿಹ್ನೆ ಮತ್ತು ಘೋಷವಾಕ್ಯವನ್ನು ಬರೆಯಲಾಗಿದೆ. ಬೊಗಸೆ ಕೈ ನಡುವೆ ಬಡವ, ಶ್ರಮಿಕ ಮತ್ತು ರೈತನ ಚಿತ್ರಗಳಿವೆ. ಅದರ ಕೆಳಭಾಗದಲ್ಲಿ ಬಿಎಸ್‌ಆರ್ ಎಂದು ಬರೆಯಲಾಗಿದೆ. `ಸ್ವಾಭಿಮಾನದೊಂದಿಗೆ ಬದುಕೋಣ~ ಎಂಬುದು ಅದರಲ್ಲಿರುವ ಘೋಷವಾಕ್ಯ.ಶ್ರೀರಾಮುಲು ಅವರು ಇದುವರೆಗೆ ಎಲ್ಲಿಯೂ ತಮ್ಮ ಹೊಸ ಪಕ್ಷದ ಹೆಸರಾಗಲಿ ಇತರ ವಿವರಗಳನ್ನು ತಿಳಿಸಿಲ್ಲ. ಸಂಕ್ರಾಂತಿ ನಂತರವೇ ಅದನ್ನು ಬಹಿರಂಗ ಮಾಡುವುದಾಗಿ ಹೇಳಿದ್ದರು. ಈ ನಡುವೆ ಶನಿವಾರ ಇದ್ದಕ್ಕಿದ್ದಂತೆ ಬ್ಯಾನರ್ ಪ್ರತ್ಯಕ್ಷವಾಗಿದೆ.ಗಣಿ ಹಗರಣದ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿಯ ವಿಚಾರಣೆ ಜ. 5ರಂದು ನಡೆದಿತ್ತು. ಆ ದಿನ ಅವರಿಗೆ ಜಾಮೀನು ದೊರೆತಿದ್ದರೆ ಸಂಕ್ರಾಂತಿಯ ದಿನದಂದು ಪಕ್ಷದ ಅಧಿಕೃತ ಘೋಷಣೆ ಮಾಡುತ್ತಿದ್ದರು. ಆದರೆ ಜಾಮೀನು ಅರ್ಜಿಯ ವಿಚಾರಣೆ ಜ. 23ಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಘೋಷಣೆ ವಿಳಂಬವಾಗಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)