ಶ್ರೀಲಂಕಾಕ್ಕೆ ಏಕದಿನ ಸರಣಿ

ಢಾಕಾ (ಎಎಫ್ಪಿ): ಕುಶಾಲ್ ಪೆರೇರಾ (106) ಸಿಡಿಸಿದ ಆಕರ್ಷಕ ಶತಕದ ಬಲದಿಂದ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧ ಇಲ್ಲಿ ಕೊನೆಗೊಂಡ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 6 ವಿಕೆಟ್ ಜಯ ಸಾಧಿಸಿದೆ. ಜೊತೆಗೆ 3 ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್ ಸ್ವೀಪ್’ ಸಾಧನೆ ತೋರಿದೆ.
ಷೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂ ಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಬಾಂಗ್ಲಾ 50 ಓವರ್ಗಳಲ್ಲಿ 8 ವಿಕೆಟ್ಗೆ 240 ರನ್ ಪೇರಿಸಿತು.
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಲಂಕಾ 47.3 ಓವರ್ಗಳಲ್ಲಿ 4 ವಿಕೆಟ್ಗೆ 246ರನ್ ಕಲೆಹಾಕಿ ಸಂಭ್ರಮಿಸಿತು.
ಆರಂಭಿಕ ವಿಕೆಟ್ಅನ್ನು ಬೇಗನೇ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾಕ್ಕೆ ಮೊಮಿನುಲ್ ಹಕ್ (60; 60ಎ, 8ಬೌಂ) ನೆರವಾದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಉತ್ತಮ ಆಟದ ಹೊರತಾಗಿಯೂ ತಂಡ ಸಾಧಾರಣ ಮೊತ್ತಕ್ಕೆ ಕುಸಿಯಿತು.
ಲಂಕಾ ಪರ ಪೆರೇರಾ ಹಾಗೂ ದಿನೇಶ್ ಚಾಂಡಿಮಾಲ್ (64; 70ಎ, 4ಬೌಂ) ಉತ್ತಮ ಆಟ ಪ್ರದರ್ಶಿಸಿದರು. ಇವರಿಬ್ಬರು ಮೂರನೇ ವಿಕೆಟ್ಗೆ 138 ರನ್ ಜೊತೆ ಯಾಟವಾಡಿ ತಂಡಕ್ಕೆ ಜಯ ತಂದುಕೊಟ್ಟರು. 124 ಎಸೆತ ಎದುರಿಸಿದ ಪೆರೇರಾ 6 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ: 50 ಓವರ್ಗಳಲ್ಲಿ 8 ವಿಕೆಟ್ಗೆ 240 (ಮೊಮಿನುಲ್ ಹಕ್ 60, ನಾಸೀರ್ ಹೊಸೇನ್ 38; ಧಮ್ಮಿಕಾ ಪ್ರಸಾದ್ 49ಕ್ಕೆ3, ಸುರಂಗಾ ಲಕ್ಮಲ್ 24ಕ್ಕೆ2): ಶ್ರೀಲಂಕಾ: 47.3 ಓವರ್ಗಳಲ್ಲಿ 4 ವಿಕೆಟ್ಗೆ 246 (ಕುಶಾಲ್ ಪೆರೇರಾ 106, ದಿನೇಶ್ ಚಾಂಡಿಮಾಲ್ 64; ಮಹಮೂದುಲ್ಲಾ 38ಕ್ಕೆ2, ರುಬೆಲ್ ಹೊಸೇನ್ 69ಕ್ಕೆ2). ಫಲಿತಾಂಶ: ಶ್ರೀಲಂಕಾಕ್ಕೆ 6 ವಿಕೆಟ್ ಜಯ. 3 ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್ ಸ್ವೀಪ್’ ಸಾಧನೆ.
ಪಂದ್ಯ ಶ್ರೇಷ್ಠ: ಕುಶಾಲ್ ಪೆರೇರಾ
ಸರಣಿ ಶ್ರೇಷ್ಠ: ಸಚಿತ್ರ ಸೇನನಾಯಕೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.